ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ (Sting Operation Case) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಲಿಂಕ್ ಸಮೇತ ದೂರು ನೀಡಿದರೂ ಸುಳಿವು ಪತ್ತೆಯಾಗಿಲ್ಲ.
ತನಿಖೆ ವೇಳೆ ಆ ಲಿಂಕ್ಗಳ ಹಿನ್ನೆಲೆಯ ಬಗ್ಗೆ ಮಾಹಿತಿ ಪತ್ತೆಯಾಗ್ತಿಲ್ಲ. ಅಪ್ಲೋಡ್ ಮಾಡಿದವರು ಯಾರು? ಡಿವೈಸ್ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಇದುವರೆಗೆ 15ಕ್ಕೂ ಹೆಚ್ಚು ಜನರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಆದರೆ ವಿಡಿಯೋ ಎಲ್ಲಿಂದ ಅಪ್ಲೋಡ್ ಆಗಿದೆ ಎಂಬುದಕ್ಕೆ ಪೊಲೀಸರಿಗೆ ಸಾಕ್ಷ್ಯ ಸಿಕ್ಕಿಲ್ಲ. ಇದನ್ನೂ ಓದಿ: ನನ್ನ ಆರೋಗ್ಯ ಚೆನ್ನಾಗಿದೆ.. ಗೃಹ ಸಚಿವರು ನನ್ನ ಹೃದಯದ ಕಾಳಜಿ ವಹಿಸೋದು ಬೇಡ: ಹೆಚ್ಡಿಕೆ ಟಾಂಗ್
ವಿಡಿಯೋ ಭಾರತದಿಂದಲೇ ನಕಲಿ ಐಪಿ ಬಳಸಿ ಅಪ್ಲೋಡ್ ಮಾಡಲಾಗಿದೆಯಾ? ಆಥವಾ ಬೇರೆ ದೇಶದಿಂದ ಅಪ್ಲೋಡ್ ಮಾಡಲಾಗಿತ್ತಾ ಎಂಬ ಮಾಹಿತಿ ಇನ್ನೂ ಅಸ್ಪಷ್ಟವಾಗಿದೆ. ವಿಡಿಯೋದಲ್ಲಿ ಇರುವ, ವಿಡಿಯೋ ಮಾಡಿಕೊಂಡಿರೋ ವ್ಯಕ್ತಿಯನ್ನೂ ವಿಚಾರಣೆ ಮಾಡಲಾಗಿದೆ. ಆದರೆ ಅಪ್ಲೋಡ್ ಆದ ಬಗ್ಗೆ ಮಾಹತಿ ಲಭ್ಯವಾಗಿಲ್ಲ. ಸದ್ಯ ಸೈಬರ್ ಕ್ರೈಮ್ ಪೊಲೀಸರು ವಿಚಾರಣೆಗೆ ಒಳಪಡಿಸಿ ಎಲ್ಲರನ್ನೂ ಬಿಟ್ಟು ಕಳಿಸಿದ್ದಾರೆ.
2023 ರಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು ಎಂಬುದನ್ನು ಬಿಟ್ಟು ಬೇರೇನು ಸ್ಪಷ್ಟ ಮಾಹಿತಿ ತನಿಖೆಯಿಂದ ತಿಳಿದು ಬಂದಿಲ್ಲ. ಸೈಬರ್ ಕ್ರೈಂ ಪೊಲೀಸರಿಂದ ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇಲ್ಲದೇ ಹೋಗಿದ್ರೆ ಕಾಂಗ್ರೆಸ್ ಯಾವತ್ತೋ ಮುಗಿದು ಹೋಗ್ತಿತ್ತು: ಹೆಚ್ಡಿಕೆ
