– ಕೈಮ್ಯಾಕ್ಸ್ ಹಂತಕ್ಕೆ ಸ್ಟಿಂಗ್ ಆಪರೇಷನ್ ಕೇಸ್
ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ (Sting Operation) ಪ್ರಕರಣ ಇನ್ನೇನು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುತ್ತಿದೆ. ಸ್ಟಿಂಗ್ ಆಪರೇಷನ್ನಲ್ಲಿ ಭಾಗಿದ್ದಾರೆ ಎನ್ನಲಾದ ಕೇರಳ ಮೂಲದ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಮುಸುಕುಧಾರಿ ಮಹಿಳೆ ಸಿದ್ದರಾಮಯ್ಯಗೆ (Siddaramaiah) ಕ್ಲೀನ್ಚಿಟ್ ಕೊಟ್ಟಿದ್ದಾಳೆ. ಸಂಚುಕೋರರ ಒತ್ತಡಕ್ಕೆ ನಾನು ಸುಳ್ಳು ಹೇಳಿದ್ದೆ. ಉದ್ದೇಶಪೂರ್ವಕವಾಗಿಯೇ ನನ್ನಿಂದ ಸುಳ್ಳು ಹೇಳಿಸಿದ್ದರು ಎಂದು ಮಹಿಳೆ ಒಪ್ಪಿಕೊಂಡಿದ್ದಾಳೆ.
`ಸಂಚುಕೋರರ ಒತ್ತಡಕ್ಕೆ ಮಣಿದು ನಾನು ಸುಳ್ಳು ಹೇಳಿದ್ದೆ. ಉದ್ದೇಶಪೂರ್ವಕವಾಗೇ ನನ್ನಿಂದ ಸುಳ್ಳು ಹೇಳಿಸಿದ್ದರು. ನಾನು ಸಿದ್ದರಾಮಯ್ಯರನ್ನ ನೋಡೇ ಇಲ್ಲ. ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಅನ್ನೋದೇ ಷಡ್ಯಂತ್ರ. ಇದು ಕಳಂಕ ತರುವ ಪ್ರಯತ್ನ ಅಂತಾ ಮಹಿಳೆ ಹೇಳಿದ್ದಾಳೆ.

ಸದ್ಯ ಮುಸುಕುಧಾರಿ ಮಹಿಳೆಯ ಹೇಳಿಕೆ ದಾಖಲಿಸಿಕೊಂಡಿರುವ ಮಹಿಳೆ ಒಂದೆರಡು ವಾರದಲ್ಲೇ ಚಾರ್ಜ್ಶೀಟ್ ಸಲ್ಲಿಸುವ ಸಾಧ್ಯತೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ರಾಹುಲ್ ಭೇಟಿಗೆ ಮುಂದಾದ ಸಿದ್ದರಾಮಯ್ಯ
ಸ್ಟಿಂಗ್ ವಿವಾದದ ಮಧ್ಯೆ ರಾಹುಲ್ ಭೇಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ನವೆಂಬರ್ 2ರಂದು ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿದ್ದಾರೆ. ಸ್ಟಿಂಗ್ ಆಪರೇಷನ್, ರಾಜ್ಯ ರಾಜಕೀಯ ಬಗ್ಗೆ ಚರ್ಚೆ ನಡೆಯಲಿದೆ.
ಇನ್ನೂ ಸ್ಟಿಂಗ್ ಆಪರೇಷನ್ ಸೂತ್ರಧಾರಿಯನ್ನ ಮೊದಲು ಬಂಧಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಮಾತನಾಡಿ, ಸ್ಟಿಂಗ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ಸ್ಟಿಂಗ್ ಹೆಸರಲ್ಲಿ ಸಿದ್ದರಾಮಯ್ಯರಿಗೆ ಅಪಮಾನ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಒಬ್ರು ಮಾಜಿ ಸಿಎಂ ತಮ್ಮ ಮೇಲೆ ಸ್ಟಿಂಗ್ ಆಗಿದೆ ಅಂತ ಹೇಳಿದ್ರೂ, ಸಿಎಂ ಡಿಕೆಶಿ ಗಂಭೀರವಾಗಿ ತಗೊಂಡಿಲ್ಲ ಅಂತಾ ಹೇಳಿದ್ದಾರೆ.
