ನವದೆಹಲಿ: ಕಳೆದ ವರ್ಷ ನವೆಂಬರ್‍ನಲ್ಲಿ ನಿಷೇಧವಾಗಿದ್ದ ನೋಟುಗಳು ಇನ್ನೂ ನಿಮ್ಮಲ್ಲಿದ್ದರೆ ದಂಡ ಕಟ್ಟಲು ರೆಡಿಯಾಗಿ.
ಇದೀಗ ವ್ಯಕ್ತಿಯೊಬ್ಬ 10ಕ್ಕಿಂತ ಹೆಚ್ಚು ಮತ್ತು ವಿಶೇಷ ಅಧ್ಯಯನ, ಹಳೆ ನೋಟುಗಳನ್ನು ಸಂಗ್ರಹಿಸುವ ಮಂದಿ 25ಕ್ಕಿಂತ ಹೆಚ್ಚಿನ ಹಳೆಯ ನೋಟುಗಳನ್ನು ಸಂಗ್ರಹಿಸುವಂತಿಲ್ಲ. ಒಂದು ವೇಳೆ ಈ ಮಿತಿಗಿಂತಲೂ ಹೆಚ್ಚಿನ ನೋಟುಗಳು ನಿಮ್ಮಲ್ಲಿದ್ದರೆ ನೀವು ದಂಡ ಕಟ್ಟಬೇಕು.
Advertisement
ಡಿಸೆಂಬರ್‍ನಲ್ಲಿ ಹಳೆಯ ನೋಟುಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರದ ಹೊಣೆಗಾರಿಕೆಯನ್ನು ಕೊನೆಗೊಳಿಸುವುದಕ್ಕಾಗಿ ನಿರ್ದಿಷ್ಟ ಬ್ಯಾಂಕ್ ನೋಟುಗಳ (ಹೊಣೆಗಾರಿಕೆ ಸ್ಥಗಿತ) ಮಸೂದೆ ಮಂಡಿಸಲಾಗಿತ್ತು. ಈ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹಿ ಹಾಕಿದ್ದು, ಈಗ ಕಾಯ್ದೆಯಾಗಿ ಜಾರಿಗೆ ಬಂದಿದೆ.
Advertisement
ಒಬ್ಬ ವ್ಯಕ್ತಿ 10 ಕ್ಕಿಂತ ಹೆಚ್ಚು ನಿಷೇಧಿತ ನೋಟುಗಳನ್ನು ಇಟ್ಟುಕೊಂಡರೆ ಅದು ಅಪರಾಧ ಎನ್ನುವ ಅಂಶ ಈ ಕಾಯ್ದೆಯಲ್ಲಿದೆ. ಅಪರಾಧ ಸಾಬೀತಾದರೆ ಕನಿಷ್ಠ 10 ಸಾವಿರ ಅಥವಾ ಹೊಂದಿರುವ ನೋಟುಗಳ ಐದು ಪಟ್ಟು ಹೆಚ್ಚು ಮೊತ್ತದಷ್ಟು ದಂಡ ವಿಧಿಸಬಹುದಾಗಿದೆ.
Advertisement
ನೋಟ್ ನಿಷೇಧಗೊಂಡ ಅವಧಿಯಲ್ಲಿ ವಿದೇಶಕ್ಕೆ ತೆರಳಿದ್ದ ವ್ಯಕ್ತಿಗಳಿಗೆ ಹಳೆಯ ನೋಟುಗಳನ್ನು ಜಮಾ ಮಾಡಲು ಮಾರ್ಚ್ 31ರ ವರೆಗೆ ಅನುಮತಿ ನೀಡಲಾಗಿದೆ. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆಯನ್ನು ತೋರಿಸಿ ಹಣವನ್ನು ಜಮೆ ಮಾಡಿದ್ದರೆ, ಆ ವ್ಯಕ್ತಿಗಳಿಗೆ ಕನಿಷ್ಠ 5 ಸಾವಿರ ರೂ. ಅಥವಾ ಹೊಂದಿರುವ ನೋಟುಗಳ ಐದು ಪಟ್ಟು ಯಾವುದು ಹೆಚ್ಚೋ ಆ ಮೊತ್ತದಷ್ಟು ದಂಡ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ.
Advertisement
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ 8ರಂದು ಭ್ರಷ್ಟಾಚಾರ ಹಾಗೂ ಕಪ್ಪುಹಣವನ್ನು ಹೋಗಲಾಡಿಸುವ ಸಲುವಾಗಿ ಏಕಾಏಕಿ 500ರೂ. ಹಾಗೂ 1,000ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿತ್ತು. ಆ ಬಳಿಕ ಡಿಸೆಂಬರ್ 31ರವರೆಗೆ ಹಳೆಯ ನೋಟುಗಳನ್ನು ಬ್ಯಾಂಕ್‍ಗಳಲ್ಲಿ ಜಮೆ ಮಾಡಲು ಕಾಲಾವಕಾಶ ನೀಡಲಾಗಿತ್ತು.