ಬೆಂಗಳೂರು: ರೇಸ್‌ನಲ್ಲಿ 7ನೇ ಸ್ಥಾನ ಪಡೆದಿದ್ದಕ್ಕೆ ಕುದುರೆ ಓಡಿಸಿದ್ದ ಜಾಕಿ (Horse Jockey) ಮೇಲೆ ಸ್ವೀವರ್ಡ್(Stewards) ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನ.1 ರಂದು ಬೆಂಗಳೂರಿನ ಟರ್ಫ್ ಕ್ಲಬ್‌ನಲ್ಲಿ ನಡೆದ ರೇಸ್‌ನಲ್ಲಿ ( Racing) ಜೋಲಿಸ್ ಸ್ಟಾರ್ ಹೆಸರಿನ ಕುದುರೆಯನ್ನು ಜಾಕಿ ರುಶಾಲ್ ಓಡಿಸಿದ್ದರು. ರುಶಾಲ್ ಅಪ್ರೆಂಟಿಸ್ ಜಾಕಿಯಾಗಿದ್ದರಿಂದ ಅಷ್ಟೊಂದು ಅನುಭವ ಇರಲಿಲ್ಲ. ಲೈಸೆನ್ಸ್ ಪಡೆದು ಒಂದು ತಿಂಗಳಾಗಿತ್ತು . ಹೀಗಾಗಿ ಜೋಲಿಸ್ ಸ್ಟಾರ್ ಕುದರೆಯನ್ನ ಓಡಿಸಿದ್ದ ಜಾಕಿ ರುಶಾಲ್ 7 ನೇ ಸ್ಥಾನ ಪಡೆದಿದ್ದರು.
ರೇಸ್‌ನಲ್ಲಿ 7ನೇ ಸ್ಥಾನ ಪಡೆದಿದ್ದಕ್ಕೆ ವಿಚಾರಣೆಗೆ ಬರಬೇಕೆಂದು ರುಶಾಲ್ ಅವರನ್ನು ಸ್ಟೀವರ್ಡ್ ರವಿಶಂಕರ್ ತನ್ನ ಚೇಂಬರ್‌ಗೆ ಕರೆಸಿಕೊಂಡಿದ್ದಾರೆ. ಸೀನಿಯರ್ ಸ್ಟೀವರ್ಡ್ ಅರಸ್ ಸಮ್ಮುಖದಲ್ಲೇ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಪತಿ, ಅತ್ತೆಯಿಂದ ಕಿರುಕುಳ ಆರೋಪ – ಮಗುವಿನೊಂದಿಗೆ ನದಿಗೆ ಹಾರಿ ಗೃಹಿಣಿ ಆತ್ಮಹತ್ಯೆ
ಮೊದಲಿಗೆ ಆ ಆಘಾತದಿಂದ ಹೊರಬರದ ಜಾಕಿ ರುಶಾಲ್ ಖಿನ್ನತೆಯಿಂದ ಆತ್ಮಹತ್ಯೆ ಬಗ್ಗೆ ಸಹ ಚಿಂತನೆ ನಡೆಸಿದ್ದರು. ಕೊನೆಗೆ ಸ್ನೇಹಿತರ ಮೂಲಕ ನ.11 ರಂದು ಜಾಕಿ ಅಸೋಸಿಯೇಷನ್‌ಗೆ ದೂರು ನೀಡಿದ್ದಾರೆ. ಜಾಕಿಯ ಮೇಲಿನ ಹಲ್ಲೆ ಬಗ್ಗೆ ಬಾಂಬೆ ಜಾಕಿ ಅಸೋಸಿಯೇಷನ್ ಇಂದ ಖಂಡನೆ ವ್ಯಕ್ತವಾಗಿದೆ.
ತಪ್ಪು ಮಾಡಿದ್ರೆ ಕರೆದು ಬುದ್ದಿವಾದ ಹೇಳಬೇಕೇ ಹೊರತು ಹಲ್ಲೆ ನಡೆಸೋದು ಎಷ್ಟು ಸರಿ? ನೂರಾರು ಕನಸು ಕಟ್ಟಿಕೊಂಡು ಹಗಲಿರುಳು ಶ್ರಮ ಪಟ್ಟು ಜಾಕಿಯಾಗುತ್ತಾರೆ. ಆದರೆ ಲೈಸೆನ್ಸ್ ಅಥಾರಿಟಿ ನಮ್ಮ ಕೈಯಲ್ಲಿ ಇರುತ್ತದೆ ಎಂದು ಜಾಕಿಗಳ ಮೇಲೆ ಹಲ್ಲೆ ನಡೆಸುವುದು ಅಕ್ಷಮ್ಯ ಅಪರಾಧ ಎಂಬ ಮಾತುಗಳು ವ್ಯಕ್ತವಾಗಿದೆ
ಸ್ವೀವರ್ಡ್‌ಗಳು ಅಂದರೆ ಯಾರು?
ಕುದುರೆ ಓಟದ ಸ್ಪರ್ಧೆಗಳಲ್ಲಿ ನ್ಯಾಯಸಮ್ಮತತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರೇಸ್‌ಟ್ರಾಕ್‌ನಲ್ಲಿ ಇರುವ ತೀರ್ಪುಗಾರರನ್ನು ಸ್ವೀವರ್ಡ್‌ಗಳು ಎಂದು ಕರೆಯಲಾಗುತ್ತದೆ. ರೇಸಿಂಗ್ ಆಡಳಿತ ನಿಗದಿಪಡಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಜಾರಿಗೊಳಿಸುವ ಜವಾಬ್ದಾರಿ ಇವರ ಮೇಲಿರುತ್ತದೆ.

