ಲಕ್ನೋ: ಬೀದಿಯಲ್ಲಿ ಕಚೋರಿ, ಸಮೋಸ ಮಾರಾಟದ ಮೂಲಕ ವಾರ್ಷಿಕ 60 ಲಕ್ಷದಿಂದ 1 ಕೋಟಿ ರೂ. ಆದಾಯ ಪಡೆಯುತ್ತಿದ್ದ ಬೀದಿ ವ್ಯಾಪಾರಿ ಮೇಲೆ ತೆರಿಗೆ ಇಲಾಖೆಯ ಕಣ್ಣುಬಿದ್ದಿದ್ದು, ವ್ಯಾಪಾರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಉತ್ತರ ಪ್ರದೇಶದ ಅಲಿಗಢ್‍ನಲ್ಲಿರುವ ಬೀದಿ ವ್ಯಾಪಾರಿ ಮುಖೇಶ್ ಅವರು ಕೇವಲ ಕಚೋರಿ, ಸಮೋಸ ಮಾರಾಟ ಮಾಡುವುದರ ಮೂಲಕವೇ ಕೋಟ್ಯಧಿಪತಿ ಆಗಿದ್ದಾರೆ.
Advertisement
Advertisement
ಹೌದು. ಅಲಿಗಢ್‍ನಲ್ಲಿರುವ ಸೀಮಾ ಸಿನಿಮಾ ಹಾಲ್ ಬಳಿ `ಮುಖೇಶ್ ಕಚೋರಿ’ ಹೆಸರಿನ ಅಂಗಡಿಯನ್ನು ಮುಖೇಶ್ ನಡೆಸುತ್ತಿದ್ದಾರೆ. ಇವರು ತಯಾರಿಸುವ ಕಚೋರಿ, ಸಮೋಸದ ರುಚಿಗೆ ಇಲ್ಲಿನ ತಿಂಡಿ ಪ್ರಿಯರು ಫಿದಾ ಆಗಿದ್ದು, ಪ್ರತಿದಿನ ಇಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತದೆ.
Advertisement
Advertisement
ಕೆಲವು ದಿನಗಳ ಹಿಂದೆ ವಾಣಿಜ್ಯ ತೆರಿಗೆ ಇಲಾಖೆಗೆ ಮುಖೇಶ್ ಆದಾಯದ ಮೇಲೆ ಯಾರೋ ದೂರು ನೀಡಿದ್ದರು. ಹೀಗಾಗಿ ರಾಜ್ಯ ತೆರಿಗೆ ಇಲಾಖೆಯು ಮುಖೇಶ್ ಮಾರಾಟದ ಬಗ್ಗೆ ದೂರು ಸ್ವೀಕರಿಸಿ, ಈ ಬಗ್ಗೆ ಪರಿಶೀಲನೆ ನಡೆಸಲು ಕೆಲವು ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿತ್ತು. ಬಳಿಕ ತೆರಿಗೆ ಅಧಿಕಾರಿಗಳು ಪಕ್ಕದ ಅಂಗಡಿಯಲ್ಲಿ ನೆಲೆಯೂರಿ ಮುಖೇಶ್ ಪ್ರತಿದಿನ ಎಷ್ಟು ವ್ಯಾಪಾರ ಮಾಡುತ್ತಾರೆ ಎನ್ನುವ ಬಗ್ಗೆ ಮಾಹಿತಿ ಕಲೆಹಾಕಿ ದಿನನಿತ್ಯದ ವ್ಯವಹಾರದ ಲೆಕ್ಕಾಚಾರ ಹಾಕಿದ್ದಾರೆ.
ಈ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಮತ್ತು ಮಾರಾಟವಾದ ಆಹಾರ ಪದಾರ್ಥಗಳ ಸಂಖ್ಯೆಯನ್ನು ಆಧರಿಸಿ ಅವರ ಅಂದಾಜಿನ ಪ್ರಕಾರ, ಮುಖೇಶ್ ಅವರ ವಾರ್ಷಿಕ ವಹಿವಾಟು ಸುಮಾರು 60 ಲಕ್ಷದಿಂದ 1 ಕೋಟಿ ರೂ.ವರೆಗೂ ಇದೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಮುಖೇಶ್ ತನ್ನ ಅಂಗಡಿಯನ್ನು ಜಿಎಸ್‍ಟಿ ಅಡಿಯಲ್ಲಿ ನೋಂದಾಯಿಸಿರಲಿಲ್ಲ. ಸುಮಾರು 12 ವರ್ಷಗಳಿಂದ ಈ ವ್ಯಾಪಾರ ನಡೆಸುತ್ತಿದ್ದರೂ ಈವರೆಗೇ ಯಾವುದೇ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಿರಲಿಲ್ಲ. ಆದ್ದರಿಂದ ಐಟಿ ಮುಖೇಶ್‍ಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದೆ