ಹೊಸ ಸರ್ಕಾರದಿಂದ ವರ್ಗಾವಣೆಗೊಂಡಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ತಡೆ ಭಾಗ್ಯ

Public TV
1 Min Read
POLICE 2

ಬೆಂಗಳೂರು: ಹೊಸ ಸರ್ಕಾರದಲ್ಲಿ ವರ್ಗಾವಣೆಗೊಂಡ ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ತಡೆ ಭಾಗ್ಯ ಸಿಕ್ಕಿದೆ. ಮಂಗಳವಾರ ರಾಜ್ಯಾದ್ಯಂತ 211 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅವರ ಪೈಕಿ ಕೆಲ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಗೆ ಇಂದು ತಡೆ ಸಿಕ್ಕಿದೆ.

11 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಆದೇಶಕ್ಕೆ ಡಿಜಿಐಜಿಪಿ ಕಚೇರಿಯಿಂದ ತಡೆ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಹಲವು ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಗೆ ತಡೆ ನೀಡಿದೆ. ಇದನ್ನೂ ಓದಿ: ಆಟೋಗೆ ಸೈಡ್ ಬಿಡಲಿಲ್ಲ ಅಂತ KSRTC ಚಾಲಕನ ಮೇಲೆ ಹಲ್ಲೆ – ಮೂವರು ಅರೆಸ್ಟ್

ಯಶವಂತಪುರ ಟ್ರಾಫಿಕ್ ಸಂಚಾರ ಇನ್‌ಸ್ಪೆಕ್ಟರ್ ರವಿ ಗೌಡ ಬಿ, ಯಶತಪುರ ಲಾ ಅಂಡ್ ಆರ್ಡರ್ ಇನ್‌ಸ್ಪೆಕ್ಟರ್ ಧನಂಜಯ್, ನಂದಿನಿ ಲೇಔಟ್ ಪೊಲೀಸ್ ಲಕ್ಷ್ಮಣ್ ಜೆ, ಜಾನ್ಞಭಾರತಿ ಪೊಲೀಸ್ ಠಾಣೆಯ ಅಶತ್ಥಗೌಡ, ಪೀಣ್ಯ ಪೊಲೀಸ್ ಠಾಣೆಯ ಗೋವಿಂದರಾಜು, ಬೇಗೂರು ಪೊಲೀಸ್ ಠಾಣೆಯ ಕೃಷ್ಣಕುಮಾರ್, ಕೆಎಸ್ ಲೇಔಟ್ ಠಾಣೆಯ ಜಗದೀಶ್, ಕೆಆರ್ ಮಾರ್ಕೆಟ್ ಇನ್‌ಸ್ಪೆಕ್ಟರ್ ವಜ್ರಮುನಿ, ಪುಟ್ಟೇನಹಳ್ಳಿ ಇನ್‌ಸ್ಪೆಕ್ಟರ್ ರವಿಕುಮಾರ್, ಮಲ್ಲೇಶ್ವರಂ ಇನ್‌ಸ್ಪೆಕ್ಟರ್ ಅನಿಲ್‌ಕುಮಾರ್, ಜಿಗಣಿ ಇನ್‌ಸ್ಪೆಕ್ಟರ್ ಎಡ್ವಿನ್ ಪ್ರದೀಪ್ ಅವರ ವರ್ಗಾವಣೆಗೆ ತಡೆ ನೀಡಲಾಗಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article