ಬಿಜೆಪಿಯಲ್ಲೇ ಇರಿ, ಆದ್ರೆ ಎಎಪಿಗಾಗಿ ಕೆಲಸ ಮಾಡಿ: BJP ಕಾರ್ಯಕರ್ತರಲ್ಲಿ ಕೇಜ್ರಿವಾಲ್‌ ಮನವಿ

Public TV
2 Min Read
CM Arvind Kejriwal

ಗಾಂಧೀನಗರ: ನೀವು ಬಿಜೆಪಿಯಲ್ಲೇ ಇರಿ. ಆದರೆ ಆಮ್‌ ಆದ್ಮಿ ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮನವಿ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತರು ಬಿಜೆಪಿಯಿಂದ ʻಗಳಿಸುʼವುದನ್ನು ಮುಂದುವರಿಸಬೇಕು. ಆದರೆ ಆಪ್‌ಗಾಗಿ ʻಒಳಗಿನಿಂದʼ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇವಸ್ಥಾನಕ್ಕೆ ಭೇಟಿ ನೀಡಿದ್ದ ಗೆಹ್ಲೋಟ್ ಎದುರು ‘ಮೋದಿ, ಮೋದಿ’ ಎಂದು ಕೂಗಿದ ಭಕ್ತರು 

BJP FLAG

ಚುನಾವಣಾ ಕಣದಲ್ಲಿರುವ ಗುಜರಾತ್‌ಗೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ರಾಜ್‌ಕೋಟ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ನಮಗೆ ಬಿಜೆಪಿ ನಾಯಕರು ಬೇಡ. ಬಿಜೆಪಿ ತನ್ನ ನಾಯಕರನ್ನು ಉಳಿಸಿಕೊಳ್ಳಬಹುದು. ಬಿಜೆಪಿಯ ಪ್ರಮುಖರು, ಗ್ರಾಮ, ಬೂತ್, ತಾಲೂಕುಗಳಲ್ಲಿ ಕಾರ್ಯಕರ್ತರು ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಇಷ್ಟು ವರ್ಷಗಳ ನಂತರವೂ ಪಕ್ಷದಲ್ಲಿ ಅವರ ಸೇವೆಗೆ ಪ್ರತಿಯಾಗಿ ಬಿಜೆಪಿ ಏನು ನೀಡಿದೆ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ ಎಂದು ಬಿಜೆಪಿ ನಾಯಕರಿಗೆ ಟಾಂಗ್‌ ಕೊಟ್ಟಿದ್ದಾರೆ.

ಬಿಜೆಪಿ ಕಾರ್ಯಕರ್ತರು ಮತ್ತು ಅವರ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ಸೇವೆ, ವಿದ್ಯುತ್‌ ಮತ್ತು ಗುಣಮಟ್ಟದ ಶಿಕ್ಷಣವನ್ನು ಬಿಜೆಪಿ ನೀಡಿಲ್ಲ. ಆದರೆ ಅವರ ಕಲ್ಯಾಣಕ್ಕಾಗಿ ಆಪ್ ಕಾಳಜಿ ವಹಿಸುತ್ತದೆ ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸ್ತಾರಾ ರಾಹುಲ್ ಗಾಂಧಿ? – ಹಿರಿಯ ನಾಯಕರಿಂದ ಮುಂದುವರಿದ ಮನವೊಲಿಕೆ ಪ್ರಯತ್ನ

“ನೀವು (ಬಿಜೆಪಿ ಕಾರ್ಯಕರ್ತರು) ಆ ಪಕ್ಷದಲ್ಲೇ ಇರಿ. ಆದರೆ ಎಎಪಿಗಾಗಿ ಕೆಲಸ ಮಾಡಿ. ಬಿಜೆಪಿಯಿಂದ ಹಣ ಪಡೆಯುತ್ತಾರೆ. ಅವರಿಂದ ಹಣ ಪಡೆಯಿರಿ. ಆದರೆ ನಮಗಾಗಿ ಕೆಲಸ ಮಾಡಿ. ಏಕೆಂದರೆ ನಮ್ಮಲ್ಲಿ ಹಣವಿಲ್ಲ ಎಂದು ತಿಳಿಸಿದ್ದಾರೆ.

ನಾವು ಸರ್ಕಾರ ರಚಿಸಿದಾಗ ಉಚಿತ ವಿದ್ಯುತ್ ನೀಡುತ್ತೇವೆ. ಇದು ನಿಮ್ಮ ಮನೆಗಳಿಗೂ ಅನ್ವಯಿಸುತ್ತದೆ. ನಾವು ನಿಮಗೆ ಉಚಿತವಾಗಿ 24 ಗಂಟೆಗಳೂ ವಿದ್ಯುತ್ ಅನ್ನು ಒದಗಿಸುತ್ತೇವೆ. ನಿಮ್ಮ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಪಡೆಯುವ ಉತ್ತಮ ಶಾಲೆಗಳನ್ನು ನಿರ್ಮಿಸುತ್ತೇವೆ. ನಿಮ್ಮ ಕುಟುಂಬದ ಸದಸ್ಯರಿಗೆ ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ನಾವು ಖಚಿತಪಡಿಸುತ್ತೇವೆ. ನಿಮ್ಮ ಕುಟುಂಬದಲ್ಲಿರುವ ಮಹಿಳೆಯರಿಗೆ ಭತ್ಯೆಯಾಗಿ 1,000 ರೂ. ನೀಡುತ್ತೇವೆ ಎಂದು ಭರವಸೆಗಳನ್ನು ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *