ಜೈಪುರ: ರಾಮನ ದೇವಸ್ಥಾನಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಭಕ್ತರು ʼಮೋದಿ ಮೋದಿʼ ಎಂದು ಘೋಷಣೆ ಕೂಗಿದ ಘಟನೆ ವೀಡಿಯೋ ಭಾರೀ ವೈರಲ್ ಆಗುತ್ತಿದೆ.
ಜೈಸಲ್ಮೇರ್‌ನಲ್ಲಿರುವ ರಾಮ ಮಂದಿರಕ್ಕೆ ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅಲ್ಲಿದ್ದ ಭಕ್ತರು ಮೋದಿ ಮೋದಿ ಎಂದು ಘೋಷಣೆಯನ್ನು ಕೂಗಿದ್ದಾರೆ. ಇದರಿಂದಾಗಿ ಗೆಹ್ಲೋಟ್‍ಗೆ ಮುಜುಗರದ ಪರಿಸ್ಥಿತಿ ಉಂಟಾಗಿದೆ. ಆದರೂ ಅದನ್ನು ತೋರ್ಪಡಿಸದೇ ಜನರತ್ತ ಕೈಬೀಸುತ್ತಲೇ ಮುಂದೆ ಸಾಗಿದ್ದಾರೆ.
Advertisement
रामदेवरा पहुंचे गहलोत जी का स्वागत हमारे आदरणीय प्रधानमंत्री जी के नाम के नारों से हुआ!
श्रद्धालु नारा लगाकर अपनी पसंद बता रहे थे और गहलोत जी हाथ हिलाकर अभिवादन स्वीकार रहे थे।
अब सीएम साहब कहेंगे “मैं लोकप्रिय हूं, लोग मुझे देखकर नारे लगाते हैं।”#Rajasthan pic.twitter.com/RxZBHMuwsA
— Gajendra Singh Shekhawat (@gssjodhpur) September 2, 2022
Advertisement
ಈ ವೀಡಿಯೋವನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಯ್ಯ ಹಂಚಿಕೊಂಡಿದ್ದಾರೆ. ರಾಮಮಂದಿರಕ್ಕೆ ಹೋಗಿದ್ದ ಅಶೋಕ್ ಗೆಹ್ಲೋಟ್ ಅವರನ್ನು ಪ್ರಧಾನ ಮಂತ್ರಿ ಅವರ ಹೆಸರಿನ ಘೋಷಣೆಯೊಂದಿಗೆ ಸ್ವಾಗತಿಸಲಾಯಿತು. ಭಕ್ತರು ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಯ್ಕೆಯನ್ನು ತಿಳಿಸಿದ್ದು, ಆಗ ಗೆಹ್ಲೋಟ್ ಕೈಬೀಸುವ ಮೂಲಕ ಈ ಘೋಷಣೆಗಳನ್ನು ಸ್ವೀಕರಿಸಿದರು ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ವ್ಯಂಗ್ಯವಾಡಿದರು. ಇದನ್ನೂ ಓದಿ: ಪರಾವಲಂಬಿ, ಆಕ್ರಮಣಕಾರಿ, ಮನೆಗೆ ವಾಪಸ್ ಹೋಗು – ಪೋಲೆಂಡ್‍ನಲ್ಲಿ ಭಾರತೀಯನಿಗೆ ಜನಾಂಗೀಯ ನಿಂದನೆ
Advertisement
Advertisement
ರಾಜ್ಯದಲ್ಲಿನ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ಅರ್ಧಕ್ಕಿಂತ ಹೆಚ್ಚಿನದು ಸುಳ್ಳು ಹಾಗೂ ಕಟ್ಟು ಕಥೆಗಳು ಎಂದು ಗೆಹ್ಲೋಟ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಅಲ್ಲಿನ ಜನರು ಗೆಹ್ಲೋಟ್ ಅವರನ್ನು ಬರಮಾಡಿಕೊಳ್ಳುವ ಸಂದರ್ಭದಲ್ಲಿ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ದಲಿತ ಬಾಲಕಿಯರು ಬಡಿಸಿದ ಊಟವನ್ನು ಬಿಸಾಡಿ ಎಂದ ಅಡುಗೆಯವ – ಬಂಧನ