ನವದೆಹಲಿ: ಪಾಕಿಸ್ತಾನ (Pakistan) ಮತ್ತು ಕಾಂಗ್ರೆಸ್ (Congress) ಸ್ಥಿತಿ ಒಂದೇ ರೀತಿಯಾಗಿದೆ. ಪಾಕ್ ಆರ್ಥಿಕವಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿದೆ. ಈಗ ನೈತಿಕವಾಗಿ, ಬೌದ್ಧಿಕವಾಗಿಯೂ ದಿವಾಳಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.
ಪಾಕ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬ ಬಿಜೆಪಿ ಆರೋಪದ ವಿಚಾರಕ್ಕೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಮಾಧ್ಯಮದಲ್ಲೂ ವಿಚಾರ ಬಂದಿದೆ. ಆ ವ್ಯಕ್ತಿಯನ್ನು ಸರ್ಕಲ್ ಮಾಡಿ ಗುರುತಿಸಲಾಗಿದೆ. ಸರ್ಕಾರ ಈ ವ್ಯಕ್ತಿಯನ್ನು ವಿಚಾರಣೆ ಮಾಡಿಲ್ಲ. ಇದು ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮರಿ ಖರ್ಗೆ ಪುಕ್ಕಲ, ಸ್ವಂತ ಕ್ಷೇತ್ರದಲ್ಲಿ ಸತ್ಯವನ್ನು ಎದುರಿಸುವ ಧೈರ್ಯವಿಲ್ಲ: ಸೂಲಿಬೆಲೆ ಕಿಡಿ
Advertisement
Advertisement
ರಾಜ್ಯ ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ಜಾತಿಗಣತಿ ವರದಿ ಸರಿಯಿಲ್ಲ ಎಂದು ಕಾಂಗ್ರೆಸ್ ಪಕ್ಷದವರೇ ಹೇಳಿದ್ದಾರೆ. ಡಿಸಿಎಂ, ಶಾಮನೂರು ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದಲ್ಲೇ ಇರುವ ಭಿನ್ನಾಭಿಪ್ರಾಯದ ಬಗ್ಗೆ ಏನು ಹೇಳುತ್ತೀರಾ? ಇದು ಗಣತಿ ಅಲ್ಲ, ಕೇವಲ ವರದಿ. ಜನಗಣತಿ ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅವಕಾಶ. ಗಣತಿ ಸರಿ ಆಗಿಲ್ಲ, ಮನೆಮನೆಗೆ ಹೋಗಿಲ್ಲ ಎಂಬ ಆರೋಪ ಕೂಡ ಇದೆ. ಚುನಾವಣಾ ಸಮಿತಿ ಸಭೆಯ ಬಗ್ಗೆ ನನಗೇನು ಗೊತ್ತಿಲ್ಲ. ಅದು ಪಕ್ಷದ ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ. ಊಹಾಪೋಹಗಳ ಮೇಲೆ ಉತ್ತರಕೊಡಲ್ಲ ಎಂದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಹೆಚ್ಡಿಕೆ ಬಿಜೆಪಿಯನ್ನ ಬೀದಿಗೆ ನಿಲ್ಲಿಸಿದ್ದಾರೆ, ಮುಂದೆ ಇನ್ನೇನು ಕಾದಿದೆಯೋ: ಹೆಚ್.ಸಿ ಬಾಲಕೃಷ್ಣ
Advertisement
Advertisement
ಡಿ.ಕೆ ಹಿಮಾಚಲಕ್ಕೆ ಹೋಗಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಇರೋದು ಮೂರು ರಾಜ್ಯದಲ್ಲಿ. ಆ ಮೂರು ಸರ್ಕಾರದಲ್ಲಿ ಇವರು ಟ್ರಬಲ್ ಶೂಟರ್. ಹಾಗೆನಾದರೂ ಇವರು ಟ್ರಬಲ್‌ಶೂಟರ್ ಆಗಿದ್ದರೆ ದೇಶಾದ್ಯಂತ ಕಾಂಗ್ರೆಸ್‌ಗೆ ಆಗಿರುವ ಟ್ರಬಲ್ ಶೂಟ್ ಮಾಡಲಿ. ಕಾಂಗ್ರೆಸ್ 40-50 ಕ್ಷೇತ್ರಗಳು ಗೆಲ್ಲಲ್ಲ. ಅದನ್ನು ಗೆದ್ದರೆ ಇವರು ಟ್ರಬಲ್ ಶೂಟರ್ ಎಂದು ಹೇಳಿದರು. ಇದನ್ನೂ ಓದಿ: ವಿಧಾನಸೌಧಲ್ಲಿ ಪಾಕ್ ಪರ ಘೋಷಣೆ – ಸರ್ಕಾರಕ್ಕೆ ಎಫ್‌ಎಸ್‌ಎಲ್ ವರದಿ ಸಲ್ಲಿಕೆ