ಒಟ್ಟೋವಾ: ಮಹಾತ್ಮ ಗಾಂಧಿ ಪ್ರತಿಮೆಯ ಮೇಲೆ ದುಷ್ಕರ್ಮಿಗಳು ಕೆಟ್ಟದಾಗಿ ಬರೆದು, ವಿಷ್ಣು ದೇವಾಲಯದ ಕೆಲವು ಪ್ರತಿಮೆಗಳನ್ನು ವಿರೂಪಗೊಳಿಸಿದ ಘಟನೆ ಕೆನಡಾದ ಒಂಟಾರಿಯೊದ ರಿಚ್ಮಂಡ್ ಹಿಲ್ ನಗರದಲ್ಲಿ ನಡೆದಿದೆ.
ಕೆನಡಾದಲ್ಲಿರುವ ಯೋಂಗ್ ಸ್ಟ್ರೀಟ್ ಮತ್ತು ಗಾರ್ಡನ್ ಅವೆನ್ಯೂ ಪ್ರದೇಶದಲ್ಲಿನ ವಿಷ್ಣು ಮಂದಿರದಲ್ಲಿ ಪ್ರತಿಮೆಗಳನ್ನು ದ್ವಂಸಗೊಳಿಸಲಾಗಿದೆ. ಅದರ ಜೊತೆಗೆ ಮಹಾತ್ಮ ಗಾಂಧಿ ಪ್ರತಿಮೆಯ ಕೆಳಗೆ ಅವಾಚ್ಯ ಶಬ್ದವನ್ನು ಬಳಸಿ ಹಾನಿಗೊಳಿಸಿದ್ದಾರೆ. ಈ ಬಗ್ಗೆ ಭಾರತವು ತೀವ್ರ ದುಃಖ ವ್ಯಕ್ತಪಡಿಸಿದ್ದು, ಈ ಕೃತ್ಯವೆಸಗಿದವರ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿದೆ. ಇದನ್ನು ದ್ವೇಷದ ಕೃತ್ಯ ಎಂದು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ
Advertisement
Advertisement
ರಿಚ್‍ಮಂಡ್ ಹಿಲ್‍ನಲ್ಲಿರುವ ವಿಷ್ಣು ದೇವಾಲಯದಲ್ಲಿ ಪ್ರತಿಮೆಯನ್ನು ವಿರೂಪಗೊಳಿಸಿ, ಮಹಾತ್ಮ ಗಾಂಧಿ ಪ್ರತಿಮೆಯನ್ನು ಅವಮಾನಗೊಳಿಸಿದ್ದಾರೆ. ಈ ಕ್ರಿಮಿನಲ್ ಹಾಗೂ ದ್ವೇಷಪೂರಿತ ವಿಧ್ವಂಸಕ ಕೃತ್ಯವು ಕೆನಡಾದ ಭಾರತೀಯ ಸಮೂದಾಯದ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 7 ವರ್ಷದ ಬಾಲಕಿಗೆ ಝಿಕಾ ವೈರಸ್