ದಾವಣಗೆರೆ: ರಾಜ್ಯದಲ್ಲಿ ವಾಲ್ಮೀಕಿ (Valmiki) ವಿಶ್ವವಿದ್ಯಾಲಯ ಆಗಲೇಬೇಕು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ಹೇಳಿದ್ದಾರೆ.
ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವುದರ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ವರ್ಣಾಶ್ರಮ ಪದ್ದತಿ ಇದೆ. ದೇಶದಲ್ಲಿ ಸಮಾನತೆ ಪ್ರತಿಪಾದನೆ ಮಾಡಿದ್ರು. ಆದರೆ ಜಾತಿ ವ್ಯವಸ್ಥೆ ಮಾತ್ರ ಜೀವಂತವಾಗಿದೆ. ವಾಲ್ಮೀಕಿ ಸಮಾಜ ದೇಶದಲ್ಲಿ ದೊಡ್ಡ ಸಮಾಜವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ವಿವಿಧ ಪಕ್ಷಗಳ ಸಂಸದರ ಜೊತೆ ಸಂಸತ್‌ನ ಕ್ಯಾಂಟೀನ್‌ನಲ್ಲಿ ಊಟ ಸವಿದ ಮೋದಿ
Advertisement
Advertisement
ಆಂಧ್ರಪ್ರದೇಶ ಮತ್ತು ಪಂಜಾಬ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಲ್ಮೀಕಿ ಸಮಾಜ ಇದೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲಿ ಆಗಿನ ಸಿಎಂ ಕುಮಾರಸ್ವಾಮಿ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಲಿಲ್ಲ. ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು. ವಾಲ್ಮೀಕಿ ಸಮಾಜಕ್ಕೆ ಅಲ್ಲ ರಾಜ್ಯಕ್ಕೆ ವಾಲ್ಮೀಕಿ ವಿವಿ ಸ್ಥಾಪನೆಗೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಸಿಎಂ ಸಿದ್ದರಾಮಯ್ಯ ಈ ಕೆಲಸ ಮಾಡದೇ ಇದ್ರೆ, ಯಾರು ಕೂಡಾ ಮಾಡಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಟ್ರಾಫಿಕ್ ಫೈನ್ 50,000 ಇದ್ರೆ ಮನೆ ಬಾಗಿಲಿಗೆ ಬರಲಿದ್ದಾರೆ ಪೊಲೀಸರು ಹುಷಾರ್!
Advertisement
Advertisement
ರಾಮನ ಸಂಬಂಧವೇ ಇಲ್ಲದವರಿಗೆ ಎನೇನೋ ಮಾಡುತ್ತಿದ್ದಾರೆ. ವಾಲ್ಮೀಕಿಗೆ ಸಂಬಂಧ ಇಲ್ಲದವರು ಏನೇನೊ ಮಾಡ್ತಾ ಇದ್ದಾರೆ. ನಮಗೆ ವಾಲ್ಮೀಕಿಗೆ ಸಂಬಂಧ ಇದೆ. ಈ ಕಾರಣಕ್ಕೆ ವಾಲ್ಮೀಕಿ ವಿವಿ ಸ್ಥಾಪನೆ ಆಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊಡಗಲ್ಲಿ ಹಿಂದೂ ಒಬ್ಬ ಮುಸ್ಲಿಂನ್ನು ಹತ್ಯೆಗೈದಾಗ ಗಲಾಟೆ ಆಗ್ಲಿಲ್ಲ, ಹಿಂದೂವೇ ಹತ್ಯೆಯಾಗಿದ್ರೆ ಬೆಂಕಿ ಹಚ್ಚಿರೋರು: ದಿನೇಶ್ ಗುಂಡೂರಾವ್