ನವದೆಹಲಿ: ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದೇ ದೇಶದ ಆರ್ಥಿಕತೆ ಕುಸಿದಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕಿಸಿದ್ದಾರೆ.
ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಅವರು, ದೇಶದ ಆರ್ಥಿಕತೆಯನ್ನು ನೋಡಿದಾಗ ಹೆದರಿಕೆ ಆಗುತ್ತಿದೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ.5ಕ್ಕೆ ಕುಸಿದಿದೆ. ಇದು ದೇಶದ ಆರ್ಥಿಕತೆ ಕುಸಿಯುತ್ತಿರುವುದರ ಮುನ್ಸೂಚನೆ ಎಂದು ಅಭಿಪ್ರಾಯಪಟ್ಟರು.
Advertisement
ಮಾನವ ನಿರ್ಮಿತ ಪ್ರಮಾದ ನೋಟು ನಿಷೇಧ ಮತ್ತು ಸರಿಯಾದ ರೀತಿಯಲ್ಲಿ ಜಿಎಸ್‍ಟಿಯನ್ನು ಅನುಷ್ಠಾನಕ್ಕೆ ತರದ ಕಾರಣ ನಮ್ಮ ಆರ್ಥಿಕತೆ ಚೇತರಿಕೆ ಕಾಣುತ್ತಿಲ್ಲ. ಹೂಡಿಕೆದಾರರು ಭಯದಲ್ಲಿದ್ದಾರೆ. ತನ್ನ ಎದುರಾಳಿಗಳ ವಿರುದ್ಧ ರಾಜಕೀಯ ದ್ವೇಷ ಮಾಡುವುದನ್ನು ಬಿಟ್ಟು ಸರ್ಕಾರ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
Advertisement
Advertisement
ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಏಪ್ರಿಲ್‍ನಿಂದ ಜೂನ್ ವರೆಗಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.5ಕ್ಕೆ ಕುಸಿದಿದೆ. ಕಳೆದ ಆರುವರೆ ವರ್ಷಗಳಲ್ಲಿ ಅತ್ಯಂತ ಮಂದಗತಿಯ ಬೆಳವಣಿಗೆ ಇದಾಗಿದ್ದು, ಕೃಷಿ ಮತ್ತು ತಯಾರಿಕಾ ವಲಯದ ಕಳಪೆ ನಿರ್ವಹಣೆಯಿಂದ ಜಿಡಿಪಿ ಕಡಿಮೆ ದಾಖಲಾಗಿದೆ. ಮೇ ಅಂತ್ಯಕ್ಕೆ ಕೊನೆಗೊಂಡ ಕೊನೆಯ ತ್ರೈಮಾಸಿಕದಲ್ಲಿ ಶೇ.5.8 ಜಿಡಿಪಿ ದಾಖಲಾಗಿತ್ತು.
Advertisement
2018-19ರ ಮೊದಲ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯ ಶೇ.12.1 ರಷ್ಟು ಪ್ರಗತಿ ಸಾಧಿಸಿದ್ದರೆ ಈ ಬಾರಿ ಶೇ.0.6 ಬೆಳವಣಿಗೆ ಸಾಧಿಸಿದೆ. ಕೃಷಿ, ಅರಣ್ಯ, ಮೀನುಗಾರಿಗೆ ಕ್ಷೇತ್ರ ಶೇ.2 ರಷ್ಟು ಬೆಳವಣಿಗೆ ಸಾಧಿಸಿದರೆ ಕಳೆದ ಬಾರಿ ಈ ಅವಧಿಯಲ್ಲಿ ಶೇ.5.1 ರಷ್ಟು ಪ್ರಗತಿ ಸಾಧಿಸಿತ್ತು. ನಿರ್ಮಾಣ ವಲಯ 2018-19 ಮೊದಲ ತ್ರೈಮಾಸಿಕದಲ್ಲಿ ಶೇ.9.6 ರಷ್ಟು ಪ್ರಗತಿ ಸಾಧಿಸಿದ್ದರೆ ಈ ಬಾರಿ ಶೇ.5.7ಕ್ಕೆ ಕುಸಿದಿದೆ.
ಕೈಗಾರಿಕಾ ಉತ್ಪಾದನ ಭಾರೀ ಇಳಿಕೆಯಾಗಿದೆ. ಈ ಹಿಂದೆ ಈ ಅವಧಿಯಲ್ಲಿ ಶೇ.5.1 ರಷ್ಟು ಪ್ರಗತಿ ಸಾಧಿಸಿದರೆ ಈ ಬಾರಿ ಶೇ.3.6ಕ್ಕೆ ಇಳಿಕೆಯಾಗಿದೆ. ಕಳೆದ 19 ವರ್ಷದಲ್ಲಿ ಪ್ರಯಾಣಿಕ ವಾಹನ ಕೈಗಾರಿಕೆ ವಲಯದ ಪ್ರಗತಿ ಇಳಿಕೆಯಾಗಿದ್ದು ಜುಲೈ ತಿಂಗಳಿನಲ್ಲಿ ಶೇ.31 ರಷ್ಟು ಮಾರಾಟದಲ್ಲಿ ಇಳಿಕೆಯಾಗಿತ್ತು.
ವಾರ್ಷಿಕ ಜಿಡಿಪಿ ದರ ಎಷ್ಟಿತ್ತು?
2014-15 – 7.4 %
2015-16 – 8 %
2016-17 – 8.1 %
2017-18 – 7.2 %
2018-19 – 6.9 %
2019-20 – 5 %(ಮೊದಲ ತ್ರೈಮಾಸಿಕ)
Our economy has not recovered from the man made blunders of demonetisation & a hastily implemented GST… I urge the govt to put aside vendetta politics & reach out to all sane voices to steer our economy out of this crisis: Former PM Dr Manmohan Singh #DrSinghOnEconomicCrisis pic.twitter.com/83cBJWHay9
— Congress (@INCIndia) September 1, 2019