ಬೆಂಗಳೂರು: ಹೈಕೋರ್ಟ್ ಪೂರ್ಣ ಪೀಠದಲ್ಲಿ 8ನೇ ದಿನವೂ ಹಿಜಬ್ ಅರ್ಜಿ ವಿಚಾರಣೆ ಸಂಬಂಧ ಕಾವೇರಿದ ವಾದ ನಡಿಯಿತು. ಇಂದು ಸರ್ಕಾರದ ಪರ ವಕೀಲರು ತಮ್ಮ ವಾದವನ್ನು ಮುಕ್ತಾಯಗೊಳಿಸಿದರು.
Advertisement
ರಾಜ್ಯದಲ್ಲಿ ಎಲ್ಲಿಯೂ ಹಿಜಬ್‍ಗೆ ನಿರ್ಬಂಧವಿಲ್ಲ. ಆದ್ರೆ, ಅದು ಕಡ್ಡಾಯವಾಗಬಾರದು. ಅದನ್ನು ಸಂಬಂಧಿಸಿದ ಮಹಿಳೆಯರ ಆಯ್ಕೆಗೆ ಬಿಡಬೇಕು ಎಂದು ಸರ್ಕಾರದ ಪರ ಅಡ್ವೊಕೇಟ್ ಜನರಲ್ ನಾವದಗಿ ವಾದ ಮಂಡಿಸಿದ್ರು. ನಾವದಗಿಯವರು, ಕುರಾನ್ ಪತ್ರಿಯನ್ನು ನ್ಯಾಯಮೂರ್ತಿಗಳಿಗೆ ನೀಡಿ, ಮಹಿಳೆಯರು ತಮ್ಮ ಸೌಂದರ್ಯ ಅನ್ನು ತೋರಿಸಬಾರದು. ತಮ್ಮ ಬಳಿ ಇರುವ ದಪ್ಪಟ್ಟದಲ್ಲೇ ತನ್ನ ಸೌಂದರ್ಯ ಮುಚ್ಚಬೇಕು. ಸುರಾ 33 ವಚನ 55ರಲ್ಲಿ ಅಲ್ಲಿ ಈ ರೀತಿ ಉಲ್ಲೇಖ ಇದೆ ಎಂದು ಎಜಿ ಹೇಳಿದರು. ಇದನ್ನೂ ಓದಿ: ಹಿಜಬ್ ವಿವಾದ: ಕೊಡಗಿನ ವಿವಿಧ ಪದವಿ ಕಾಲೇಜಿನ 94 ವಿದ್ಯಾರ್ಥಿನಿಯರು ಗೈರು
Advertisement
Advertisement
ಫ್ರಾನ್ಸ್‍ನಲ್ಲಿ ಹಿಜಬ್ ಸಂಪೂರ್ಣ ನಿಷೇಧವಾಗಿದೆ. ಹಿಜಬ್ ಇಲ್ಲದಯೇ ಇಸ್ಲಾಂ ಉಳಿಯಬಹುದು. ಮಸೀದಿಯಲ್ಲಿ ನಮಾಜ್ ಮಾಡುವುದು ಮೂಲಭೂತ ಹಕ್ಕಲ್ಲ. ಬಾಬ್ರಿ ಮಸೀದಿ ಕೇಸ್‍ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಧರ್ಮದ ಮೂಲಭೂತ ಆಚರಣೆಗಷ್ಟೇ ಧಾರ್ಮಿಕ ಹಕ್ಕಿನಲ್ಲಿ ರಕ್ಷಣೆ ಇದೆ. ನಮಾಜ್‍ಗೆ ಮಸೀದಿ ಅವಿಭಾಜ್ಯ ಅಲ್ಲ. ನಮಾಜ್ ಅನ್ನು ಎಲ್ಲಿ ಬೇಕಾದ್ರೂ ಸಲ್ಲಿಸಬಹುದು. ನಮ್ಮ ದೇಶದಲ್ಲಿ ಹಿಜಬ್ ಧರಿಸೋದು ಪ್ರಮುಖ ಅಲ್ಲ. ಶಿಸ್ತು ಅನ್ನುವ ಜಾಗದಲ್ಲಿ ಕೆಲವೊಂದು ತಡೆ ನೀಡಲಾಗಿದೆ ಎಂದು ವಾದಿಸಿದರು. ಇದನ್ನೂ ಓದಿ: ಹಿಜಬ್ ಹೋರಾಟಗಾರ್ತಿ ಅಣ್ಣನ ಮೇಲೆ ಹಲ್ಲೆ
Advertisement
ಹಿಜಬ್ ಧರಿಸೋದು ಕೂಡ ಮಹಿಳೆಯರ ಆಯ್ಕೆ ಆಗಿರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಇದೆಲ್ಲ ಬರಬೇಕು. ಕೋರ್ಟ್ ಮೆಟ್ಟಿಲೇರಿದವರು ಶಿಕ್ಷಣ ಕಾಯ್ದೆಯನ್ನು ಪ್ರಶ್ನೆ ಮಾಡಿಲ್ಲ. ಶಿಕ್ಷಣ ಕಾಯ್ದೆ ಹೇಳೋದು ಸಮವಸ್ತ್ರವನ್ನು ಧರಿಸಬೇಕೆಂದು. ಜಾತ್ಯಾತೀತ ಮನೋಭಾವ ಬೆಳೆಸಬೇಕು ಎಂಬುದು ಸಮವಸ್ತ್ರದ ಉದ್ದೇಶ ಎಂದು ವಾದ ಮಂಡಿಸಿದರು.
ಮಹಿಳೆಯರು ಇಚ್ಚಿಸುವ ಬಟ್ಟೆಗಳನ್ನು ತೊಡುವ ಅಧಿಕಾರ ಇದೆ. ಆದ್ರೆ, ಅದನ್ನು ಬಿಟ್ಟು ಒತ್ತಾಯಪೂರ್ವಕವಾಗಿ ಹೇರಬಾರದು. ಹಿಜಬ್‍ಗೆ ಎಲ್ಲೂ ಕೂಡ ನಿಷೇಧ ಹೇರಿಲ್ಲ. ಆದರೆ ಹಿಜಬ್ ಕಡ್ಡಾಯವಾಗಲು ಸಾಧ್ಯವಿಲ್ಲ. ಹಿಜಬ್ ಧರಿಸಲು ಆಯಾಯ ಮಹಿಳೆಯ ಆಯ್ಕೆಗೆ ಬಿಡಬೇಕು. ಅಲ್ಪಸಂಖ್ಯಾತ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಲ್ಲ. ಮಹಿಳೆಯ ಘನತೆ, ಗೌರವಗಳ ಬಗ್ಗೆ ನಾವು ಯೋಚನೆ ಮಾಡಬೇಕು ಎಂದರು.
ಸದ್ಯ ಸರ್ಕಾರದ ಪರವೂ ವಾದ ಮುಗಿದ್ದು, ಈ ವಾರದೊಳಗೆ ಹಿಜಬ್ ವಿವಾದಕ್ಕೆ ಇತ್ಯರ್ಥ ಹಾಡಲು ನ್ಯಾಯಪೀಠ ಬಯಸಿದೆ.