ಬೆಂಗಳೂರು: ಕೈ ನಾಯಕರ ವಿರುದ್ಧದ ಸೀಕ್ರೆಟ್ ಡೈರಿಯ ಮಾಹಿತಿ ಸೋರಿಕೆ ಬೆನ್ನಲ್ಲೇ ಕಾಂಗ್ರೆಸ್ ಕೂಡಾ ಬಿಜೆಪಿ ವಿರುದ್ಧ ಡೈರಿ ಅಸ್ತ್ರವನ್ನು ಬಳಸಿದೆ. ರಾಜ್ಯ ಬಿಜೆಪಿ ನಾಯಕರು ಕೂಡಾ ಬಿಜೆಪಿ ಹೈಕಮಾಂಡ್‍ಗೆ ಕಪ್ಪ ಕೊಟ್ಟಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಡೈರಿಯ ವಿವರಗಳನ್ನೇ ನೀಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಡೈರಿಯ ಪುಟಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈಗ ಇದೇ ಡೈರಿಯ ಪುಟಗಳನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ದಾರೆ.
Advertisement
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಎಂ.ಎಲ್.ಸಿಗಳಾದ ಐವಾನ್ ಡಿಸೋಜಾ, ವಿ.ಎಸ್.ಉಗ್ರಪ್ಪ,ಹೆಚ್.ಎಂ.ರೇವಣ್ಣ ಅವರು ಬಿಜೆಪಿಯೂ ಹೈಕಮಾಂಡ್‍ಗೆ ಕಪ್ಪ ಕೊಟ್ಟಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು. ಇದೇ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ರಾಷ್ಟ್ರೀಯ ಸುದ್ದಿ ವಾಹಿನಿಯ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಕಾರ್ಯಕ್ರಮದಲ್ಲಿ ಸುದ್ದಿ ನಿರೂಪಕರು ಗೋವಿಂದರಾಜು ಅವರ ಮನೆಯಲ್ಲಿ ಸಿಕ್ಕ ಡೈರಿಯನ್ನು ಐಟಿ ಇಲಾಖೆಯಲ್ಲಿ ನೋಡಿದ್ರು ಅಂತಾ ಹೇಳಿದ್ದಾರೆ. ಇದನ್ನ ಐಟಿ ಅವರು ಕನ್ಫರ್ಮ್ ಮಾಡ್ಬೇಕು, ಆಂಕರ್ ಅಲ್ಲ ಎಂದರು.
Advertisement
ಬಿಜೆಪಿ ಹೈಕಮಾಂಡ್ ನಾಯಕರಿಗೆ ಕಪ್ಪ ಸಂದಾಯವಾಗಿದೆ. ಸಾಮಾಜಿಕ ತಾಣಗಳಲ್ಲಿ ಈಗ ಡೈರಿ ಹೊರಬಂದಿದೆ. 391 ಕೋಟಿ ರಿಸೀವ್ ಮಾಡಿರುವ ಮಾಹಿತಿಯಿದೆ. ಬಂದ ಹಣ ಮತ್ತೆ ಬೇರೆಯವರಿಗೆ ಸಂದಾಯವಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಇದೇ ವೇಳೆ ಬಿಜೆಪಿ ಮುಖಂಡರು, ನಕಲಿ ಡೈರಿಯಲ್ಲಿ ಬಿಜೆಪಿ ಹೈಕಮಾಂಡ್‍ಗೆ ಕಪ್ಪಕೊಟ್ಟಿರುವ ಬಗ್ಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾ ನಿರ್ದೇಶಕರಿಗೂ ಪತ್ರ ಬರೆದಿದ್ದಾರೆ.
Advertisement