ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜುಗೊಳ್ಳಲು ಆಮ್ ಆದ್ಮಿ ಪಾರ್ಟಿಯ (AAP) ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕಗಳನ್ನು ವಿಸರ್ಜಿಸಲಾಗಿದ್ದು, ಸದ್ಯದಲ್ಲೇ ಕ್ರಿಯಾಶೀಲ ತಂಡವನ್ನು ರಚಿಸಲಾಗುತ್ತದೆ ಎಂದು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ದೆಹಲಿ ಶಾಸಕ ದಿಲೀಪ್ ಪಾಂಡೆ (Dilip Pandey) ತಿಳಿಸಿದ್ದಾರೆ.
ಬೆಂಗಳೂರಿನ (Bengaluru) ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದಿಲೀಪ್ ಪಾಂಡೆ, ಆಮ್ ಆದ್ಮಿ ಪಾರ್ಟಿಯು ಕರ್ನಾಟಕ ವಿಧಾನಸಭಾ ಚುನಾವಣೆಗೆ (ಸಮರೋಪಾದಿಯಲ್ಲಿ ಸಿದ್ಧಗೊಳ್ಳಲಿದೆ. ಈವರೆಗಿದ್ದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ತಂಡವನ್ನು ವಿಸರ್ಜನೆ ಮಾಡಲಾಗಿದೆ. ಗ್ರಾಮ ಸಂಪರ್ಕ ಎಂಬ ರಾಜ್ಯಾವ್ಯಾಪಿ ಅಭಿಯಾನದ ಮೂಲಕ ಆಪ್ ಕಳೆದ 5 ತಿಂಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಿಕೊಂಡಿದೆ. ಈ ಅಭಿಯಾನದಲ್ಲಿ ಕರ್ನಾಟಕದ ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರ ಸಂಪರ್ಕವನ್ನು ಆಪ್ ಸಾಧಿಸಿದೆ. ಈಗ ಬದಲಾವಣೆ ತರುವಂತಹ ಹೊಸ ತಂಡವನ್ನು ರೂಪಿಸಲಾಗುತ್ತಿದೆ. ಬದಲಾವಣೆ ತರಬಲ್ಲ ಈ ಸಾಮಾನ್ಯ ಪುರುಷರು ಹಾಗೂ ಮಹಿಳೆಯರೊಂದಿಗೆ ಕೈಜೋಡಿಸುವುದರಿಂದ ಪಕ್ಷವು ಚುನಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲಿದೆ ಎಂದು ದೃಢವಾಗಿ ನಂಬಿದ್ದೇವೆ. ಬಿಜೆಪಿಯ ಭ್ರಷ್ಟ ಹಾಗೂ ಅಸಮರ್ಥ ಸರ್ಕಾರವನ್ನು ನಾವು ಮಣಿಸಲಿದ್ದೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
Advertisement
Advertisement
ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ತಂಡವು ಮುಂಬರುವ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ. ಇದಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಸಂದೀಪ್ ಪಾಠಕ್‌ರವರ ಸಮರ್ಥ ಮಾರ್ಗದರ್ಶನ ಇರಲಿದೆ. ಆಪ್ ರಾಷ್ಟ್ರೀಯ ಪಕ್ಷವಾದ ಬಳಿಕ, ರಾಜ್ಯವನ್ನು ಅಭಿವೃದ್ಧಿಯಲ್ಲಿ ನಂಬರ್ ಒನ್ ಮಾಡಲು ಜನರು ಪಕ್ಷವನ್ನು ಭರವಸೆಯಿಂದ ನೋಡುತ್ತಿದ್ದಾರೆ. ಆದ್ದರಿಂದ ಒಳ್ಳೆಯ ಉದ್ದೇಶ ಹೊಂದಿದ ವ್ಯಕ್ತಿಗಳು, ಹೋರಾಟಗಾರರು, ರಾಜಕಾರಣಿಗಳು ಪಕ್ಷಕ್ಕೆ ಸೇರ್ಪಡೆಯಾಗಿ ಈ ಕನಸನ್ನು ನನಸಾಗಿಸುವುದಾದರೆ ನಾವು ಸ್ವಾಗತಿಸುತ್ತೇವೆ ಎಂದು ಪಾಂಡೆ ಹೇಳಿದರು. ಇದನ್ನೂ ಓದಿ: ಈ ಚುನಾವಣೆಯಲ್ಲಿ ಮಹಿಳೆಯರಿಗೇ ಹೆಚ್ಚು ಟಿಕೆಟ್ ಕೊಡ್ಬೇಕು – ಕಾಂಗ್ರೆಸ್ ಹೈಕಮಾಂಡ್‌ಗೆ ಉಮಾಶ್ರೀ ಮನವಿ
Advertisement
Advertisement
ದಶಕಗಳಿಂದ ಸಾಂಪ್ರದಾಯಿಕ ಪಕ್ಷಗಳು ಕರ್ನಾಟಕದ ಜನತೆಯ ಅರ್ಹತೆಗೆ ತಕ್ಕಂತಹದ್ದು ಸಿಗದಂತೆ ಮಾಡಿದೆ. ಕಳೆದ 5 ತಿಂಗಳಲ್ಲಿ ನಡೆದ ಸಂಘಟನೆ ಬಲಪಡಿಸುವ ಪ್ರಕ್ರಿಯೆಯಿಂದಾಗಿ ಆಪ್ ಎಲ್ಲಾ ಜಿಲ್ಲೆಗಳು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಭದ್ರವಾದ ಅಸ್ತಿತ್ವ ಪಡೆದುಕೊಂಡಿದೆ. ಮುಂದಿನ 2 ವಾರಗಳಲ್ಲಿ ನಾವಿದನ್ನು ಗ್ರಾಮೀಣ ಭಾಗಕ್ಕೆ ತೆಗೆದುಕೊಂಡು ಹೋಗುತ್ತೇವೆ. ಬುಧವಾರ ಬೆಂಗಳೂರಿನಲ್ಲಿ ನಡೆದ ವಿಧಾನಸಭಾ ಸ್ಪರ್ಧಾಕಾಂಕ್ಷಿಗಳ ಸಭೆಯಲ್ಲಿ 224 ಕ್ಷೇತ್ರಗಳಿಗೆ ಸಾವಿರ ಆಕಾಂಕ್ಷಿಗಳು ಚರ್ಚೆ ಹಾಗೂ ತರಬೇತಿಯಲ್ಲಿ ಭಾಗವಹಿಸಿದ್ದರು. ಅಮೂಲಾಗ್ರ ಬದಲಾವಣೆಗೆ ಕರ್ನಾಟಕ ಸಿದ್ಧವಾಗುತ್ತಿದೆ ಎಂಬುದರ ಸಂಕೇತವಿದು ಎಂದು ದಿಲೀಪ್ ಪಾಂಡೆ ಹೇಳಿದರು. ಇದನ್ನೂ ಓದಿ: ರನ್‌ವೇ ಸಿದ್ದವಾಗಿದೆ, ಕೌಶಲ್ಯಗಳನ್ನು ಕಲಿತು ಟೇಕಾಫ್ ಆಗಿ – ಯುವ ಜನತೆಗೆ ಮೋದಿ ಕರೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k