ತೃತೀಯ ಲಿಂಗಿಗಳಿಗೆ ಸಂಜೆ ಕಾಲೇಜು ಆರಂಭಿಸಿ: ಡಿಸಿಪಿ ಅರುಣಾಂಗ್ಸು ಗಿರಿ

Public TV
1 Min Read
mng transgender

ಮಂಗಳೂರು: ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಅವರಿಗಾಗಿ ಸಂಜೆ ಕಾಲೇಜು ಪ್ರಾರಂಭಿಸಿ, ಉದ್ಯೋಗ-ಆಧಾರಿತ ತರಗತಿ ಶುರು ಮಾಡಿದಲ್ಲಿ ಸ್ವಂತ ಉದ್ಯಮ ಪ್ರಾರಂಭಿಸಲು ಅನುಕೂಲವಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಗ್ಸು ಗಿರಿ ಅಭಿಪ್ರಾಯಪಟ್ಟರು.

ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶ ಮತ್ತು ಕನ್ನಡ ವಿಭಾಗ ಕೆನರಾ ಕಾಲೇಜು ಮಂಗಳೂರು ಇವರ ಸಹಯೋಗದಲ್ಲಿ ನಡೆದ ತೃತೀಯ ಲಿಂಗಿಗಳ ಬದುಕು, ಬವಣೆ ಕುರಿತ ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಕೆಲವು ಮಕ್ಕಳು ಪರ್ಯಾಯ ಲಿಂಗವೆಂದು ಗುರುತಿಸಲು ಬಯಸುತ್ತಾರೆ ಎಂದು ಹೇಳುತ್ತಾರೆ. ಅರ್ಜಿ ನಮೂನೆಗಳಲ್ಲಿ ಪರ್ಯಾಯ ಲಿಂಗ ಆಯ್ಕೆಯನ್ನು ಸೇರಿಸಬೇಕು ಇದು ಅಂತಹ ಮಕ್ಕಳಿಗೆ ಸಹಾಯ ಮಾಡುತ್ತದೆ ಎಂದರು.

TRANSGENDERS 2

ಪರಿವರ್ತನ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಿ ಮತ್ತು ವ್ಯವಸ್ಥಾಪಕ ಟ್ರಸ್ಟಿ ವೈಲೆಟ್ ಪಿರೇರಾ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಜನಿಸಿದ ತೃತೀಯ ಲಿಂಗಿಗಳಿಂದ ಯಾವುದೇ ಸಮಸ್ಯೆಗಳಿಲ್ಲ ಆದರೆ ಇತರ ಸ್ಥಳಗಳಿಂದ ಮಂಗಳೂರಿಗೆ ಬಂದ ತೃತೀಯ ಲಿಂಗಿಗಳಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ತೃತಿಯ ಲಿಂಗಿಗಳು ಮಂಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬದಲಾವಣೆಯ ಅವಶ್ಯಕತೆಯಿದೆ ಇದರಿಂದ ತೃತಿಯ ಲಿಂಗಿಗಳು ಸಹ ಸಾಮಾನ್ಯ ಜೀವನವನ್ನು ನಡೆಸಬಹುದು. ಪರಿವರ್ತನ ಚಾರಿಟೇಬಲ್ ಟ್ರಸ್ಟ್ ತೃತೀಯ ಲಿಂಗಿಗಳ ಬೆಂಬಲಕ್ಕಿದ್ದು, ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದರು.

WhatsApp Image 2020 01 04 at 2.54.14 PM

ಪರಿವರ್ತನಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ರಮ್ಯಾ ಗೌಡ ಮಾತನಾಡಿ, ನಾವು ತೃತೀಯ ಲಿಂಗಿಗಳು ಹುಡುಗರಾಗಿ ಜನಿಸುತ್ತೇವೆ ಮತ್ತು ಕ್ರಮೇಣ ಹುಡುಗಿಯರಾಗುತ್ತೇವೆ. ನಾವು ಮೊದಲು ನಮ್ಮ ಮನೆಗಳಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತೇವೆ. ಜನಿಸಿದಾಗ ಹೆತ್ತವರು ಸಂತೋಷ ಪಡುತ್ತಾರೆ. ಆದರೆ ಬೆಳೆದಂತೆ ನಮ್ಮ ಹೆತ್ತವರು ಮತ್ತು ಸಮಾಜದಿಂದ ಪ್ರತ್ಯೇಕಿಸಲ್ಪಟ್ಟಿದ್ದೇವೆ. ಜೀವನೋಪಾಯಕ್ಕಾಗಿ ಭಿಕ್ಷೆ ಬೇಡಲು ಮತ್ತು ಲೈಂಗಿಕ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ. ನಾವೂ ಮೀಸಲಾತಿಗೆ ಒಳಪಟ್ಟಿದ್ದೇವೆ, ಉದ್ಯೋಗವನ್ನು ಪಡೆಯಬಹುದು ಮತ್ತು ಜೀವನೋಪಾಯವನ್ನುಗಳಿಸಬಹುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *