ಬೆಂಗಳೂರು: ಐಪಿಎಲ್ (IPL) ಮೆಗಾ ಹರಾಜಿಗೂ ಮುನ್ನವೇ ಆರ್‌ಸಿಬಿ ಇಬ್ಬರು ವಿದೇಶಿ ಆಟಗಾರರನ್ನು ಕೈ ಬಿಡುವ ಸಾಧ್ಯತೆಯಿದೆ. ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದ್ದು, ಆರ್‌ಸಿಬಿ (RCB) ಫ್ಯಾನ್ಸ್‌ಗೆ ಆಘಾತ ನೀಡಿದೆ.
ಕಳೆದ ಐಪಿಎಲ್‍ನಲ್ಲಿ ಫಾಫ್ ಬ್ಯಾಟಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಮ್ಯಾಕ್ಸ್‌ವೆಲ್ ನಿರೀಕ್ಷೆಯ ಪ್ರಕಾರ ಪ್ರದರ್ಶನ ನೀಡಿರಲಿಲ್ಲ. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭಾರಿ ವಿಫಲರಾದರು. ಆದರೂ ತಂಡದ ಯಶಸ್ಸಿನಲ್ಲಿ ಇಬ್ಬರೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.
ಇಬ್ಬರು ಆಟಗಾರರ ಕೈಬಿಟ್ಟ ಬಳಿಕ ತಂಡಕ್ಕೆ ಕೆ.ಎಲ್ ರಾಹುಲ್ ಸೇರ್ಪಡೆಯಾಗಬಹುದು ಎಂದು ವರದಿ ಪ್ರಕಟವಾಗಿದ್ದರೂ ಹರಾಜು ನಡೆಯುವ ವೇಳೆ ಅಧಿಕೃತವಾಗಿ ತಿಳಿದು ಬರಲಿದೆ.
ಆರ್‌ಸಿಬಿಯು ಕ್ಯಾಮರೂನ್ ಗ್ರೀನ್ ಮತ್ತು ವಿಲ್ ಜ್ಯಾಕ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ಬಿಡುಗಡೆ ಮಾಡಿದರೆ ಬೇರೆ ತಂಡಗಳು ಇವರನ್ನು ಖರೀದಿಸುವ ಸಾಧ್ಯತೆ ಕಡಿಮೆಯಿದೆ.
ಡು ಪ್ಲೆಸಿಸ್‍ಗೆ ಈಗಾಗಲೇ 40 ವರ್ಷವಾಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಹೆಚ್ಚು ವಯಸ್ಸು ಆಗದೇ ಇದ್ದರೂ ಎರಡು ತಿಂಗಳಲ್ಲಿ 36 ವರ್ಷ ಪೂರೈಸಲಿದ್ದಾರೆ. ಅವರು ಕ್ರಿಕೆಟ್‍ನಲ್ಲಿ ಉತ್ತಮ ಕೌಶಲ್ಯಗಳ ಹೊರತಾಗಿಯೂ ಸಾಕಷ್ಟು ಋತುಗಳಲ್ಲಿ ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ಈ ಇಬ್ಬರೂ ಆಟಗಾರರ ವೃತ್ತಿ ಜೀವನ ಅಂತ್ಯವಾಗುವ ಸಾಧ್ಯತೆ ಇದೆ.