– ಮಂಡ್ಯ ‘ಕೈ’ ಅಭ್ಯರ್ಥಿ ವಿರುದ್ಧ ಒಂದೇ ಒಂದು ಕ್ರಿಮಿನಲ್ ಕೇಸ್ ಕೂಡ ಇಲ್ಲ
– ಪತ್ನಿ ಕುಸುಮಾ ಕೂಡ ಕೋಟ್ಯಧೀಶೆ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ (Mandya Lok Sabha) ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಸೋಮವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ 410 ಕೋಟಿ ಆಸ್ತಿಯನ್ನು ಘೋಷಿಸಿದ್ದಾರೆ. ನೂರಾರು ಕೋಟಿ ಒಡೆಯನಾದರೂ ಸ್ಟಾರ್ ಚಂದ್ರು ಹೆಸರಲ್ಲಿ ಒಂದೇ ಒಂದು ಕಾರಿಲ್ಲ.
Advertisement
ಸ್ಟಾರ್ ಚಂದ್ರು ಹಾಗೂ ಅವರ ಪತ್ನಿ ಕುಸಮಾ ಇಬ್ಬರೂ ಕೋಟ್ಯಧೀಶರು. ಸ್ಟಾರ್ ಚಂದ್ರು ಹೆಸರಲ್ಲಿ 237 ಕೋಟಿ ರೂ. ಹಾಗೂ ಪತ್ನಿ ಕುಸುಮಾ ಹೆಸರಲ್ಲಿ 146 ಕೋಟಿ ರೂ. ಆದಾಯ ಘೋಷಿಸಿಕೊಂಡಿದ್ದಾರೆ. ಸ್ಟಾರ್ ಚಂದ್ರುಗೆ ಪಿತ್ರಾರ್ಜಿತವಾಗಿ (ಅವಿಭಕ್ತ ಕುಟುಂಬದ ಆಸ್ತಿ) ಬಂದಿರುವ ಆಸ್ತಿಯೇ 26 ಕೋಟಿ ಇದೆ. ಹಿಂದೂ ಅವಿಭಕ್ತ ಕುಟುಂಬದ ಸ್ಥಿರಾಸ್ತಿ (ಎಚ್‌ಯುಎಫ್) ಮೌಲ್ಯ 26 ಕೋಟಿ. ಇವರ ಚರಾಸ್ತಿ 99.36 ಕೋಟಿ ರೂ. ಇದೆ. ಕೈಯಲ್ಲಿರುವ ನಗದು 1,36,14,355 ರೂ. ಎಂದು ತಮ್ಮ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 2.03 ಕೋಟಿ ಆಸ್ತಿ ಘೋಷಿಸಿಕೊಂಡ ಸಾರಿಗೆ ಸಚಿವರ ಪುತ್ರಿ ಸೌಮ್ಯಾ ರೆಡ್ಡಿ
Advertisement
Advertisement
ಪತ್ನಿ ಕುಸುಮಾ ಹೆಸರಲ್ಲಿ 4.20 ಕೋಟಿ ಚರಾಸ್ತಿ ಹೊಂದಿದ್ದಾರೆ. ಸ್ಥಿರಾಸ್ತಿ ಮೌಲ್ಯ 127 ಕೋಟಿ ರೂ. ಇವರ ಒಟ್ಟು ಆಸ್ತಿಯ ಮೌಲ್ಯ 146 ಕೋಟಿ ಇದೆ. ನಗದು 64,94,175 ರೂ. ಇಟ್ಟುಕೊಂಡಿದ್ದಾರೆ. ಸ್ಟಾರ್ ಚಂದ್ರು ಅವರ ಸ್ಥಿರಾಸ್ತಿ ಮೌಲ್ಯ 237 ಕೋಟಿ ರೂ. 3 ಟ್ರ್ಟಾಕ್ಟರ್ ಹೊಂದಿರುವ ಸ್ಟಾರ್ ಚಂದ್ರು ಮಾಲೀಕತ್ವದಲ್ಲಿ ಕಾರು ಇಲ್ಲ. ಪತ್ನಿ ಕುಸುಮಾ ಬಳಿಯೂ ಯಾವುದೇ ವಾಹನ ಇಲ್ಲ.
Advertisement
ಚಿನ್ನ 4.2 ಕೆಜಿ (2.30 ಕೋಟಿ ಮೌಲ್ಯ), ವಜ್ರ 71 ಸಿಟಿಎಸ್ (15 ಲಕ್ಷ ರೂ.). ಬೆಳ್ಳಿ 26 ಕೆಜಿ (21.50 ಲಕ್ಷ ರೂ.) ಹೊಂದಿದ್ದಾರೆ. ಸ್ಟಾರ್ ಚಂದ್ರು ಪತ್ನಿ ಕುಸುಮಾ ಬಳಿಯೂ ಯಾವುದೇ ಸಾಲ ಇಲ್ಲ. ಸ್ಟಾರ್ ಚಂದ್ರು ಹೆಸರಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲ. ಉದ್ಯಮಿಯಾಗಿ ಕಾಲಕಾಲಕ್ಕೆ ತೆರಿಗೆ ಪಾವತಿಸಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು? – ಗೆದ್ದವರು ಯಾರು? ಸೋತವರು ಯಾರು? – ಇಲ್ಲಿದೆ ಸಂಪೂರ್ಣ ಮಾಹಿತಿ