ಫುನಾಫುಟಿ: ಹವಾಮಾನ ಬದಲಾವಣೆ ಬಗ್ಗೆ ಸಂದೇಶ ನೀಡಲು ಸಮುದ್ರದ ನೀರಿನಲ್ಲಿ ನಿಂತು ಭಾಷಣ ಮಾಡುವ ಮೂಲಕವಾಗಿ ತುವಾಲು ದೇಶದ ಸಚಿವ ಸುದ್ದಿಯಾಗಿದ್ದಾರೆ.
ನವೆಂಬರ್ 9 ರಂದು ಸಮುದ್ರದಲ್ಲಿ ಮೊಣಕಾಲಿನಷ್ಟು ಆಳದ ನೀರಲ್ಲಿ ನಿಂತು, ತುವಾಲು ವಿದೇಶಾಂಗ ಸಚಿವ ಸೈಮನ್ ಕೋಫೆ ಅವರು ವಿಶ್ವಸಂಸ್ಥೆಯ ಕೋಪ್ 26 ಹವಾಮಾನ ಶೃಂಗಸಭೆಯಲ್ಲಿ ಸಂದೇಶವನ್ನು ನೀಡಿದರು. ಇದನ್ನೂ ಓದಿ: ತಮಿಳು ಚಿತ್ರತಂಡದ ನಂತರ ಮತ್ತೆ ಸಕ್ಕರೆ ನಾಡಿನಲ್ಲಿ ತೆಲುಗು ಸಿನಿಮಾದವರಿಂದ ಅವಾಂತರ
Advertisement
Advertisement
ವೀಡಿಯೋದಲ್ಲಿ ಏನಿದೆ: ನೀವು ನೋಡಿದಂತೆ ಇಲ್ಲಿರುವ ವಾಸ್ತವ ಸಮುದ್ರ ಮಟ್ಟಗಳು ಏರುತ್ತಿದೆ, ಕರಾವಳಿಯುದ್ದಕ್ಕೂ ಸಾಕಷ್ಟು ಸವೆತವಾಗಿದೆ, ನಾವು ಬಹಳಷ್ಟು ಹವಾಮಾನ ಮತ್ತು ಹವಾಮಾನದ ಮಾದರಿಗಳಲ್ಲಿನ ಬದಲಾವಣೆಗಳನ್ನು ನೋಡುತ್ತಿದ್ದೇವೆ. ಈ ವಿಶಿಷ್ಟ ರೀತಿಯಲ್ಲಿ ತನ್ನ ಸಂದೇಶವನ್ನು ನೀಡಲು ಅವರು ಏಕೆ ಆಯ್ಕೆ ಮಾಡಿಕೊಂಡರು ಎಂಬುದನ್ನು ವಿವರಿಸಿದ ಕೋಫೆ, ದಿನದಿಂದ ದಿನಕ್ಕೆ ತುವಾಲುವಿನಲ್ಲಿ ನಾವು ಎದುರಿಸುತ್ತಿರುವ ಸವಾಲುಗಳು ಇವು. ನಾವು ಏನು ಇದನ್ನು ಯಾವ ರೀತಿ ನಿರ್ವಹಿಸುತ್ತಿದ್ದೇವೆ ಎಂಬುದನ್ನು ತೋರಿಸಲು ಮಾಧ್ಯಮವು ಈ ಸಂದೇಶಗಳನ್ನು ಜನರಿಗೆ ತಲುಪಿಸಬಹುದೆಂದು ನಾವು ಭಾವಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡುವುದಕ್ಕೂ ಮುನ್ನ ದೇವರ ಪಾದ ಮುಟ್ಟಿ ನಮಸ್ಕರಿಸಿದ!- ವೀಡಿಯೋ ವೈರಲ್
Advertisement
In a video shown at #COP26, Tuvalu’s foreign minister Simon Kofe stands knee-deep in seawater to demonstrate the “realities of climate change” and rising sea levels.
“We are sinking, but so is everyone else.”
????:Tuvalu Ministry of Justice, Communication and Foreign Affairs pic.twitter.com/lqRotTJjyg
— Human Rights Watch (@hrw) November 9, 2021
Advertisement
ಸಮುದ್ರ ಮಟ್ಟ ಹೆಚ್ಚುತ್ತಿರುವ ಕಾರಣ ಮುಂದಿನ 50 ರಿಂದ 100 ವರ್ಷಗಳಲ್ಲಿ ಇಡೀ ರಾಷ್ಟ್ರವನ್ನು ಸ್ಥಳಾಂತರಿಸಬೇಕಾದ ಕೆಟ್ಟ ಸನ್ನಿವೇಶದ ಬಗ್ಗೆ ತನ್ನ ದೇಶವು ಗಂಭೀರವಾಗಿ ಯೋಚಿಸುತ್ತಿದೆ ಎಂದು ಕೋಫೆ ಹೇಳಿದರು. ಹವಾಮಾನ ಬದಲಾವಣೆಯ ವಿರುದ್ಧ ಬಲವಾದ ಬದ್ಧತೆಗಳನ್ನು ಮಾಡಲು ನಾವು ದೊಡ್ಡ ರಾಷ್ಟ್ರಗಳಿಗೆ ಪ್ರತಿಪಾದಿಸುತ್ತಿದ್ದರೂ, ಕೆಟ್ಟ ಸಂದರ್ಭವನ್ನು ಎದುರಿಸುವುದಕ್ಕೆ ನಾವು ಸಿದ್ಧರಾಗಬೇಕಿದೆ ಎಂದು ಅವರು ಹೇಳಿದರು.