ಹೈದರಾಬಾದ್: ಭಾರತ (India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಮೂರನೇ ಟಿ20 (T20) ಪಂದ್ಯದ ಟಿಕೆಟ್‍ಗಾಗಿ (Ticket) ಅಭಿಮಾನಿಗಳು (Fans) ಮುಗಿಬಿದ್ದು ನೂಕುನುಗ್ಗಲು ಉಂಟಾದ ಘಟನೆ ಜಿಮ್ಖಾನಾ ಮೈದಾನ (Gymkhana Ground) ನಡೆದಿದೆ.
Advertisement
ಸೆ.25 ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇಂದು ಜಿಮ್ಖಾನಾ ಮೈದಾನದಲ್ಲಿ ಟಿಕೆಟ್ ಮಾರಾಟ ನಡೆಯುತ್ತಿತ್ತು. ಟಿಕೆಟ್ ಖರೀದಿಗಾಗಿ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಟಿಕೆಟ್ ಖರೀದಿಗಾಗಿ ನೂಕುನುಗ್ಗಲು ಉಂಟಾಗಿದೆ. ಇದನ್ನೂ ಓದಿ: ರ‍್ಯಾಂಕಿಂಗ್‌ನಲ್ಲಿ ಫುಲ್‌ಶೈನ್ – ಪಾಕ್ ನಾಯಕನನ್ನು ಹಿಂದಿಕ್ಕಿದ SKY
Advertisement
Advertisement
ಈ ವೇಳೆ ಪೊಲೀಸರು ಜನರನ್ನು ಚದುರಿಸಲು ಪ್ರಯತ್ನಿಸಿದರು ಆದರೂ ಹತೋಟಿಗೆ ಬಾರದ ಕಾರಣ ಕೊನೆಗೆ ಲಾಠಿ ಲಾಠಿ ಚಾರ್ಜ್ ಮಾಡಲಾಯಿತು. ಈ ವೇಳೆ ನಾಲ್ವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: 8 ಓವರ್ 100 ರನ್ – ದುಬಾರಿಯಾದ ಭುವಿ, ಹರ್ಷಲ್: ರೋಹಿತ್ ಹೇಳಿದ್ದೇನು?
Advertisement
This is so disappointing. Passionated fans gathered at Gymkhana Ground to collect India Vs Australia tickets in Hyderabad and they're getting such treatment. pic.twitter.com/OIP96BClOH
— Mufaddal Vohra (@mufaddal_vohra) September 22, 2022
ಈಗಾಗಲೇ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಪಡೆದುಕೊಂಡಿದೆ. 2ನೇ ಟಿ20 ಪಂದ್ಯ ನಾಳೆ ನಾಗ್ಪುರದಲ್ಲಿ ನಡೆಯಲಿದ್ದು, ಮೂರನೇ ಪಂದ್ಯ ಹೈದರಾಬಾದ್‍ನಲ್ಲಿ ನಡೆಯಲಿದೆ. ಇದನ್ನೂ ಓದಿ: ಮಹಿಳಾ ಏಷ್ಯಾಕಪ್‍ಗೆ ಭಾರತ ತಂಡ ಪ್ರಕಟ – ಕೌರ್ ನಾಯಕಿ, ಮಂದಾನ ಉಪನಾಯಕಿ
ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ (Toss) ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು. 209 ರನ್‍ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆಸೀಸ್ ಪಡೆ 19.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್‍ಗಳಿಸಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ.