ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯ (Lok Sabha Election) ದಿಕ್ಸೂಚಿ ಎಂದೇ ಪರಿಗಣಿಸಲಾದ ಕರ್ನಾಟಕದ (Karnataka Election) ಭವಿಷ್ಯ ಏನು ಎಂಬುದು ಇಂದು ನಿರ್ಧಾರವಾಗಲಿದೆ. ಮತ ಎಣಿಕೆಗಾಗಿ (Vote Counting) ಬೆಂಗಳೂರಿನಲ್ಲಿ ನಾಲ್ಕು ಕಡೆ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಕಲ ಸಿದ್ಧತೆಗಳು ನಡೆದಿವೆ.
ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು 10, 11 ಗಂಟೆಗೆ ಯಾರಿಗೆ ಅಧಿಕಾರ ಎನ್ನುವುದು ಗೊತ್ತಾಗಲಿದೆ. ಸ್ಪಷ್ಟ ಜನಾದೇಶವೋ? ಮತ್ತೆ ಅತಂತ್ರ ಫಲಿತಾಂಶವೋ ಎಂಬುದು ಗೊತ್ತಾಗಲಿದೆ. ಮೊದಲು ಅಂಚೆ ಮತ, ನಂತರ ಮನೆ ಮತ, ಕೊನೆಗೆ ಇವಿಎಂಗಳ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಇದನ್ನೂ ಓದಿ: ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್ ಮಾಡಿ: ಕರ್ನಾಟಕ ಚುನಾವಣಾ ಫಲಿತಾಂಶ
ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇಂದು ದಿನವಿಡೀ ಮದ್ಯ ಮಾರಾಟ ಬಂದ್ ಇರಲಿದೆ. ಈ ಚುನಾವಣೆಯನ್ನು ಪ್ರಧಾನಿ ಮೋದಿ ಪ್ರತಿಷ್ಠೆಯಾಗಿ ಪರಿಗಣಿಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಿಗೆ ಇದು ಮಾಡು-ಇಲ್ಲವೇ ಮಡಿ ಚುನಾವಣೆಯಾಗಿದೆ.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಪಬ್ಲಿಕ್ ಟಿವಿಯನ್ನು ನೋಡಬಹುದು. ಖಚಿತ ಸುದ್ದಿಯ ಜೊತೆಗೆ ಹರಿತ ವಿಶ್ಲೇಷಣೆಯೂ ಇರಲಿದೆ. ಬೆಳಗ್ಗೆ ಆರು ಗಂಟೆಯಿಂದ ಕರುನಾಡಿನ ತೀರ್ಪು ನಾನ್ ಸ್ಟಾಪ್ ಕವರೇಜ್ ಇರಲಿದೆ. ಇದನ್ನೂ ಓದಿ: ಮತ್ತೆ ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ? – ಶಾಸಕರು, ಪಕ್ಷೇತರರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ತಂತ್ರ
Advertisement
ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ -2023
* ಒಟ್ಟು ಮತ ಕ್ಷೇತ್ರ – 224
* ಒಟ್ಟು ಅಭ್ಯರ್ಥಿಗಳು – 2631
* ಮತದಾನದ ಪ್ರಮಾಣ – 73.17 %
* ಮತ ಹಾಕಿದವರ ಸಂಖ್ಯೆ – 3,88,51,807
* ಮತ ಹಾಕಿದ ಪುರುಷರು – 1,96,58,398
* ಮತ ಹಾಕಿದ ಮಹಿಳೆಯರು – 1,91,92,372
*ಪುರುಷ-ಮಹಿಳಾ ಮತಗಳ ಅಂತರ -4,66,026