ಬೆಂಗಳೂರು: ಪ್ರೀತಿ-ಪ್ರೇಮ ಅಂತ ಕೈ ಕೈ ಹಿಡಿದು ಸುತ್ತಾಡಿದ್ದ ಪ್ರಿಯಕರನೇ ಪ್ರೇಯಸಿಯನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿಪುರದಲ್ಲಿದ್ದ ಯುವತಿ ಮನೆಯಲ್ಲಿ ಚಾಕುವಿನಿಂದ ಪ್ರಿಯತಮೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಮಮತಾ ಕೊಲೆಯಾದ ಯುವತಿ. ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದರು. ಜಯದೇವದಲ್ಲಿ ಜೊತಗೆ ಕೆಲಸ ಮಾಡಿಕೊಂಡಿದ್ದ ಹಾಸನದ ಸುಧಾಕರ್ ಪರಿಚಯವಾಗಿ ಲವ್ ಆಗಿತ್ತು. ಲವ್ ಮಾಡುವಾಗ ಕೊನೆಯವರಿಗೂ ನಿನ್ನ ಜೊತೆಯಲ್ಲೇ ಇರುತ್ತೇನೆ ಎಂದು ಮಾತುಕೊಟ್ಟಿದ್ದ. ಅವಳಿಗೆ ಗೊತ್ತಾಗದಂತೆ ಬೇರೊಂದು ಯುವತಿಯ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ. ಇದು ಮಮತಾ ಹಾಗೂ ಪ್ರಿಯಕರನ ನಡುವೆ ಜಗಳಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: Chitradurga Bus Accident | ಸಜೀವ ದಹನಗೊಂಡ ನವ್ಯಾ ಮನೆಯಲ್ಲಿ ಮಡುಗಟ್ಟಿದ ಶೋಕ
ಒಂದು ವರ್ಷಗಳ ಕಾಲ ಇಬ್ಬರು ಚೆನ್ನಾಗಿಯೇ ಇದ್ದರು. ಸುಧಾಕರ್‌ಗೆ ನಿಶ್ಚಿತಾರ್ಥ ಆಗಿದ್ದ ವಿಚಾರ ಮಮತಾ ಕಿವಿಗೆ ಬಿದ್ದ ಬಳಿಕ ಇಬ್ಬರ ನಡುವೆ ವಿರಸ ಉಂಟಾಗಲು ಆರಂಭವಾಯಿತು. ಮಾತು ಕೊಟ್ಟಿದ್ದೀಯಾ.. ಮದುವೆ ಆಗುವಂತೆ ಸುಧಾಕರ್‌ಗೆ ಯುವತಿ ದುಂಬಾಲು ಬಿದ್ದಿದ್ದಳು. ಮದುವೆ ಮಾಡಿಕೊಳ್ಳುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಕೂಡ ಆಗುತ್ತಿತ್ತು.
ನಿನ್ನೆ ಸುಧಾಕರ್ ಪ್ರೇಯಸಿ ಮಮತಾ ಮನೆಗೆ ಹೋದಾಗ, ಮದುವೆ ಆಗು.. ಇಲ್ಲದೇ ಹೋದರೆ ನಾನು ನಿಮ್ಮ ಮನೆಯವರ ಹೆಸರಿನಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಬೆದರಿಸಿದ್ದಾರೆ. ಪ್ರೇಯಸಿ ನಡೆಯಿಂದ ಕುಪಿತಗೊಂಡ ಸುಧಾಕರ್ ಆಕೆಯನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಕಾಣೆಯಾಗಿದ್ದ ಕಾಲೇಜು ವಿದ್ಯಾರ್ಥಿ ಶವವಾಗಿ ಪತ್ತೆ – ಬಾಲಕಿ ಕುಟುಂಬದ ವಿರುದ್ಧ ಕೊಲೆ ಆರೋಪ
ಕೊಲೆಯಾದಾಕೆಗೆ ವಯಸ್ಸು 39 ಹಾಗೂ ಕೊಲೆ ಆರೋಪಿಗೆ 25 ವರ್ಷ. ವಯಸ್ಸಿನ ಅಂತರ ಜಾಸ್ತಿ ಇದೆ ಎಂಬ ಕಾರಣಕ್ಕೆ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಕೊಲೆ ಮತ್ತು ಅಟ್ರಾಸಿಟಿ ಕೇಸ್ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿ ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.

