ಚೆನ್ನೈ: ಹಾಸ್ಟೆಲ್ ಲಿಫ್ಟಿನಲ್ಲಿ ವಿದ್ಯಾರ್ಥಿನಿಯನ್ನು ಹಿಡಿದುಕೊಂಡು ಸ್ವಚ್ಛತಾ ಸಿಬ್ಬಂದಿಯೊಬ್ಬ ಹಸ್ತಮೈಥುನ ಮಾಡಿ ಲೈಂಗಿಕ ಕಿರುಕುಳ ನೀಡಿದ್ದನು. ಇದರಿಂದ ಆಕ್ರೋಶಗೊಂಡ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಚೆನ್ನೈನ ಹೊರವಲಯದಲ್ಲಿರುವ ಎಸ್‍ಆರ್‍ಎಂ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ 28 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸ್ವಚ್ಛತಾ ಸಿಬ್ಬಂದಿ ಎಂದು ಗುರುತಿಸಲಾಗಿದೆ.
Advertisement
Advertisement
ಏನಿದು ಪ್ರಕರಣ?
ಈ ಘಟನೆ ಗುರುವಾರ ಮಧ್ಯಾಹ್ನ ಚೆನ್ನೈನ ಹೊರವಲಯದಲ್ಲಿರುವ ವಿವಿ ಆವರಣದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ಲಿಫ್ಟ್ ನಲ್ಲಿ ನಡೆದಿದೆ. ವಿದ್ಯಾರ್ಥಿನಿ ಲಿಫ್ಟ್ ನಲ್ಲಿ ಹೋಗುತ್ತಿದ್ದಳು. ಈ ವೇಳೆ ಲಿಫ್ಟ್ ಗೆ ಆರೋಪಿ ಬಂದಿದ್ದಾನೆ. ಮೊದಲು ವಿದ್ಯಾರ್ಥಿನಿ 4ನೇ ಮಹಡಿಯ ಬಟನ್ ಒತ್ತಿದ್ದಾಳೆ. ಆಗ ವ್ಯಕ್ತಿ 6ನೇ ಮಹಡಿಯ ಬಟನ್ ಒತ್ತಿ, ಬಳಿಕ 8ನೇ ಬಟನ್ ಒತ್ತಿದ್ದಾನೆ. ನಂತರ ವಿದ್ಯಾರ್ಥಿನಿ ಪರಾರಿಯಾಗಲು ಯತ್ನಿಸಿದ್ದಾಳೆ. ಆಗ ಆರೋಪಿ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಆಕೆಯ ಮುಂದೆಯೇ ಹಸ್ತಮೃಥುನ ಮಾಡಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ.
Advertisement
Advertisement
ಕೂಡಲೇ ವಿದ್ಯಾರ್ಥಿನಿ ಈ ಘಟನೆ ಬಗ್ಗೆ ಹಾಸ್ಟೆಲ್ ವಾರ್ಡನ್ ಗೆ ದೂರು ನೀಡಿದ್ದಾರೆ. ಬಳಿಕ ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದರು. ಘಟನೆಯ ದೃಶ್ಯಾವಳಿಯನ್ನು ನೀಡಿದ್ದರೂ, ಎರಡು ಗಂಟೆ ತಡಮಾಡಿ ದೂರು ತೆಗೆದುಕೊಂಡಿದ್ದಾರೆ. ಅಲ್ಲದೇ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರು ಧರಿಸುವ ಡ್ರೆಸ್‍ನಿಂದಾಗಿ ಈ ರೀತಿಯ ಘಟನೆ ನಡೆದಿದೆ ಎಂದು ವಿದ್ಯಾರ್ಥಿಗಳನ್ನೇ ದೂರಿದ್ದು, ನಾವು ದೂರುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವಿವಿ ಅಧಿಕಾರಿಗಳು ಹೇಳಿದ್ದಾರೆ.
ಸದ್ಯಕ್ಕೆ ನಾವು ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಿದ್ದೇವೆ. ಘಟನೆಯ ಸಂಪೂರ್ಣ ವಿವರವನ್ನು ಪಡೆಯುತ್ತಿದ್ದೇವೆ. ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ವಿವಿ ಹೇಳಿದೆ.
ಬಂಧಿತ ಆರೋಪಿ ಇತ್ತೀಚೆಗೆ ಹಾಸ್ಟೆಲ್ ಮೆಸ್ ನಿಂದ ಆಹಾರ ತ್ಯಾಜ್ಯವನ್ನು ಸ್ವಚ್ಛ ಮಾಡಲು ನೇಮಕಗೊಂಡಿದ್ದನು. ಸದ್ಯಕ್ಕೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಎಂ.ಎಸ್.ಎಂ. ವಲ್ಲವನ್ ತಿಳಿಸಿದರು. ಜೊತೆಗೆ ಮಹಿಳಾ ಹಾಸ್ಟೆಲ್ ನಲ್ಲಿ ಮಹಿಳಾ ಸಿಬ್ಬಂದಿಯನ್ನು ಮಾತ್ರ ನೇಮಿಸಲು ಕಾಲೇಜು ಆಡಳಿತಕ್ಕೆ ಪೊಲೀಸ್ ಸಲಹೆ ನೀಡಿದೆ.
The accused has been apprehended ( image below ), but we are still unsure of what steps will #SRMUniversity take. The Vice-Chancellor earlier stated that the girls were making a too big issue out of this, nearly no support from the college side has been provided to the students. pic.twitter.com/0oMMXxdIJw
— Justice for Women! (@JusticeforWome3) November 23, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv