ಬೆಂಗಳೂರು: ದಾರಿಯಲ್ಲಿ ಹೋಗುತ್ತಿದ್ದಾಗ ಮಚ್ಚಾ ಎಂದು ಕರೆದಿದ್ದಕ್ಕೆ ಒರಿಜಿನಲ್ ಮಚ್ಚಾನನು ಕರೆತಂದು ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿ (Chikkagollarahatti) ಬಳಿ ನಡೆದಿದೆ.
ಕೀರ್ತಿ ಕುಮಾರ್ ಹಲ್ಲೆಗೊಳಗಾದ ಯುವಕ. ಸುನೀಲ್ ಹಾಗೂ ಗಣೇಶ್ ಹಲ್ಲೆ ಮಾಡಿದ ಆರೋಪಿಗಳು. ಇದನ್ನೂ ಓದಿ: ಸಿಟ್ಟಿಗೆದ್ದು ಅಟ್ಟಾಡಿಸಿದ ವಿಕ್ರಾಂತ್ – ಓಡಿ ಓಡಿ ಪಾರಾದ ಇಟಿಎಫ್ ಸಿಬ್ಬಂದಿ!
ಮಾ. 14ರಂದು ರಾತ್ರಿ ಈ ಕೃತ್ಯ ನಡೆದಿದ್ದು, ಕೀರ್ತಿ ಕುಮಾರ್ ಎಂಬಾತನಿಗೆ ಸುನೀಲ್, ಗಣೇಶ್‌ರಿಂದ ಚಾಕು ಇರಿದಿದ್ದರು. ಮಧು, ಮಹೇಶ್ ಎಂಬುವವರು ವೈನ್ಸ್ ಸ್ಟೋರ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದರು. ಮಧು ಹಾಗೂ ಮಹೇಶ್ ಇಬ್ಬರೂ ಕೀರ್ತಿ ಕುಮಾರ್‌ನ ಸ್ನೇಹಿತರಾಗಿದ್ದರು. ಇಬ್ಬರ ಗಲಾಟೆಯನ್ನು ರಾಜಿ ಮಾಡಿಸಲು ಭೀಮೇಶ್ ಬಳಿ ಕೀರ್ತಿ ಕುಮಾರ್ ಕರೆದುಕೊಂಡು ಹೋಗಿದ್ದನು. ಇದನ್ನೂ ಓದಿ: ಮಳವಳ್ಳಿ ಕಲುಷಿತ ಆಹಾರ ಸೇವನೆ ಕೇಸ್ – ಮತ್ತೋರ್ವ ವಿದ್ಯಾರ್ಥಿ ಮೃತ, ಸಾವಿನ ಸಂಖ್ಯೆ 2ಕ್ಕೆ ಏರಿಕೆ
ಈ ವೇಳೆ ಸುನೀಲ್ ಎಂಬಾತ ಕುಡಿದು ಬೈಕ್‌ನಲ್ಲಿ ಮನೆ ಕಡೆಗೆ ತೆರಳುತ್ತಿದ್ದಾಗ ಜನರ ಗುಂಪು ನೋಡಿ ಬೈಕ್ ನಿಲ್ಲಿಸಿದ್ದ. ಸುನೀಲ್ ನನ್ನ ನೋಡಿದ್ದ ಕೀರ್ತಿ ಕುಮಾರ್, ಏನೋ ಗಾಡಿ ನಿಲ್ಲಿಸಿದ್ದಿಯಾ ನಡಿಯೋ `ಮಚ್ಚಾ’ ಎಂದಿದ್ದ. ನನ್ನನ್ನೇ ಮಚ್ಚಾ ಎಂದು ಕರೆಯುತ್ತೀಯಾ ಎಂದು ಸುನೀಲ್ ಆವಾಜ್ ಹಾಕಿದ್ದ. ಮನೆಗೆ ತೆರಳಿ ಒರಿಜಿನಲ್ ಮಚ್ಚಾ ಬಾಮೈದ ಗಣೇಶ್‌ನನ್ನ ಕರೆದುಕೊಂಡು ಬಂದಿದ್ದ. ಬಳಿಕ ಬಾವ, ಬಾಮೈದ ಸೇರಿ ಕೀರ್ತಿ ಕುಮಾರ್‌ಗೆ ಚಾಕುವಿನಿಂದ ಇರಿದಿದ್ದರು ಎನ್ನಲಾಗಿದೆ. ಇದನ್ನೂ ಓದಿ: ವಿದ್ಯುತ್ ಕಂಬ ಬಿದ್ದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು
ಘಟನೆಯ ಆರೋಪಿಗಳಾದ ಸುನೀಲ್ ಹಾಗೂ ಗಣೇಶ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.