ನವದೆಹಲಿ: ನೋಯ್ಡಾ ಮತ್ತು ದೆಹಲಿಯಲ್ಲಿ ಎರಡು ಶಾಲೆಗಳಿಗೆ ಶುಕ್ರವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆಯ (Bomb Threat) ಸಂದೇಶಗಳು ಬಂದಿದೆ.
ಮಯೂರ್ ವಿಹಾರ್ 1ನೇ ಹಂತದಲ್ಲಿರುವ ಅಹ್ಲ್ಕಾನ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ನೋಯ್ಡಾದ ಶಿವ ನಾಡರ್ ಶಾಲೆಗೆ ಬೆದರಿಕೆ ಇಮೇಲ್‌ಗಳು ಬಂದಿವೆ. ಇದನ್ನೂ ಓದಿ: ಕುಂಭಮೇಳದಲ್ಲಿ ಡಿಕೆಶಿ ಪುತ್ರಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಐಶ್ವರ್ಯ
ಬೆದರಿಕೆ ಸಂದೇಶ ಬರುತ್ತಿದ್ದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನ ಕಳುಹಿಸದಂತೆ ಎಲ್ಲಾ ಪೋಷಕರಿಗೆ ಸಂದೇಶ ಕಳುಹಿಸಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆ. ಸ್ಥಳಕ್ಕಾಗಮಿಸಿದ ಶ್ವಾನದಳ, ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಶೋಧಕಾರ್ಯ ನಡೆಸಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕಳೆದ 2 ದಿನಗಳ ಹಿಂದೆಯೂ ಸಹ ನೋಯ್ಡಾದ 2 ಖಾಸಗಿ ಶಾಲೆಗಳಲ್ಲಿ ಬಾಂಬ್ ಬೆದರಿಕೆ ಕೇಳಿಬಂದಿತ್ತು. 9ನೇ ಕ್ಲಾಸ್‌ನ ವಿದ್ಯಾರ್ಥಿಯೊಬ್ಬ ಶಾಲೆಗೆ ಹೋಗುವುದನ್ನು ತಪ್ಪಿಸಲು ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು. ಇದನ್ನೂ ಓದಿ: RBI: 5 ವರ್ಷಗಳ ಬಳಿಕ ರೆಪೊ ದರ ಕಡಿತ ಮಾಡಿದ ಆರ್‌ಬಿಐ