ಬೆಂಗಳೂರು: 2020, 2021ರಲ್ಲಿ ಇಡೀ ವಿಶ್ವವನ್ನೇ ಕಾಡಿದ ಕೊರೊನಾ ಈ ವರ್ಷ ಕೊನೆಯಾಗಲಿ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವತ್ತಾ ಎಲ್ಲರೂ ಒಟ್ಟಿಗೆ ಹೆಜ್ಜೆ ಹಾಕೋಣ ಎಂದು ಸಹಕಾರ ಸಚಿವ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜನತೆಗೆ ಹೊಸ ವರ್ಷದ ಶುಭ ಸಂದೇಶವನ್ನು ನೀಡಿದ್ದಾರೆ.
ಎಲ್ಲರಿಗೂ 2022ರ ಹೊಸ ವರ್ಷದ ಶುಭಾಶಯಗಳು. 2022ರಲ್ಲಿ ರೋಗ ರುಜಿನಗಳು ಸಂಭವಿಸದೆ ಜನತೆ ಸುಖ, ಸಂತೋಷ, ನೆಮ್ಮದಿಯನ್ನು ಕಾಣಲಿ. ಭವಿಷ್ಯ ಇನ್ನಷ್ಟು ಉಜ್ವಲವಾಗಲಿ. ಹೊಸ ಉಲ್ಲಾಸದಿಂದ ಹೊಸ ವರ್ಷವನ್ನು ಸ್ವಾಗತಿಸೋಣ. ಹೊಸ ಕನಸು, ಹೊಸ ಹುರುಪಿನೊಂದಿಗೆ, ಹಳೆಯ ಸುಂದರ ನೆನಪುಗಳೊಂದಿಗೆ ಭವಿಷ್ಯದತ್ತ ಹೆಜ್ಜೆ ಹಾಕೋಣ ಎಂದು ಎಸ್‍ಟಿ ಸೋಮಶೇಖರ್ ಹೊಸ ವರ್ಷಕ್ಕೆ ಹಾರೈಸಿದರು. ಇದನ್ನೂ ಓದಿ: ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಸಿಎಂ ಬೊಮ್ಮಾಯಿ
Advertisement
Advertisement
ಕಳೆದೆರಡು ವರ್ಷದಲ್ಲಿ ಕೊರೋನಾ ಸಾಕಷ್ಟು ಪಾಠ ಕಲಿಸಿದೆ. ಇಡೀ ಮನುಕುಲವನ್ನೇ ಕಾಡಿದ ಕೊರೊನಾದಿಂದ ಜನರ ಜೀವನಶೈಲಿ ಬದಲಾಗುವಂತಾಗಿದೆ. ಹೊಸವರ್ಷಾಚರಣೆಗಿಂತ ಹೊಸ ವರ್ಷದಲ್ಲಿ ಸಾಧಿಸಬೇಕಿರುವುದರ ಕಡೆ ಗಮನ ಹರಿಸಬೇಕು. ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು, ಜನರ ಜೀವನಮಟ್ಟ ಉತ್ತಮವಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು, ಯುವಕರಿಗೆ ಉದ್ಯೋಗ ಕಲ್ಪಿಸಿ ಈ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಕೆಲಸಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು. ಇದನ್ನೂ ಓದಿ: 3 ಕೋಟಿ ವೆಚ್ಚದ ರಸ್ತೆ ನಿರ್ಮಾಣ, 1 ಕೋಟಿಯ ಯುಜಿಡಿ ಕಾಮಗಾರಿಗೆ ಶೀಘ್ರ ಚಾಲನೆ: ಜಗದೀಶ್ ಶೆಟ್ಟರ್
Advertisement
2021 ಕಳೆದು 2022 ಆಗಮಿಸಿದೆ. ಸಮಯ ಬಹಳ ಅಮೂಲ್ಯ. ಪ್ರತಿಕ್ಷಣ, ಪ್ರತಿದಿನವನ್ನು ಸದ್ಬಳಕೆ ಮಾಡಿಕೊಳ್ಳೋಣ. ಪ್ರತಿಯೊಬ್ಬರ ಕನಸುಗಳು ನನಸಾಗಲಿ, ನಿಮ್ಮ ಪ್ರತಿಯೊಂದು ಹೆಜ್ಜೆಯೂ ಸುಖಕರವಾಗಿರಲಿ. ಬದುಕಿನಲ್ಲಿ ಹೊಸ ಬದಲಾವಣೆ ತರಲಿ, ಯಶಸ್ಸು ನಿಮ್ಮದಾಗಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದರು.