ಬೆಂಗಳೂರು: ಹೊಸ ವರ್ಷದ ಸಂದರ್ಭದಲ್ಲಿ ಕರ್ನಾಟಕದ ಎಲ್ಲಾ ಸವಾಲುಗಳಿಂದ ಮುಕ್ತವಾಗಿ, ಜನರ ಬದುಕು ಹಸನಾಗಿ ಹೊಸ ವರ್ಷ ಎಲ್ಲರಿಗೂ ಹರುಷ ತರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾರೈಸಿದರು.
ಇಂದು ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಪ್ರತಿಕ್ರಿಯೆ ನೀಡಿದ ಅವರು, ನಾಡಿನ ಜನರಿಗೆ ಹೊಸ ವರ್ಷದ ಶುಭ ಕೋರಿದರು. ಇದನ್ನೂ ಓದಿ: ಹೊಸ ವರ್ಷದ ಸಂಭ್ರಮ ಕಸಿದ ಕೋವಿಡ್ ಹೆಮ್ಮಾರಿ- ಬೆಂಗ್ಳೂರಿನ ಪ್ರಮುಖ ರಸ್ತೆಗಳೆಲ್ಲವೂ ನಿರ್ಜನ
Advertisement
"ಹೊಸ ಭರವಸೆಯೊಂದಿಗೆ ನೂತನ ವರ್ಷವನ್ನು ಸ್ವಾಗತಿಸುವ ಈ ಸಂಭ್ರಮದ ಸಮಯದಲ್ಲಿ ನಾವೆಲ್ಲರೂ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸೋಣ. ತಪ್ಪದೇ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಂಡು, ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸೋಣ, ಇದೇ ದೃಢ ಸಂಕಲ್ಪದೊಂದಿಗೆ ನವ ವರ್ಷವನ್ನು ಸ್ವಾಗತಿಸೋಣ": ಮುಖ್ಯಮಂತ್ರಿ @BSBommai. pic.twitter.com/Hh1tHdE5md
— CM of Karnataka (@CMofKarnataka) December 31, 2021
Advertisement
ಜಿಲ್ಲಾ ಮಟ್ಟದ ಹಲವಾರು ಆಡಳಿತಾತ್ಮಕ ವಿಚಾರ ಮತ್ತು ಯೋಜನೆಗಳ ಅನುಷ್ಠಾನದೊಂದಿಗೆ ಹೊಸ ವರ್ಷದ ಪ್ರಾರಂಭದಲ್ಲಿಯೇ ಹೊಸ ಚೈತನ್ಯ ಹಾಗೂ ಹೊಸ ದಿಕ್ಸೂಚಿಯೊಂದಿಗೆ ಅಧಿಕಾರಿಗಳು ಇನ್ನಷ್ಟು ಜನಸ್ನೇಹಿಯಾಗಿ ಆಡಳಿತ ನಡೆಸುವ ಚಿಂತನೆಯಲ್ಲಿ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.