ಬೆಂಗಳೂರು: ಉಪಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಜಯಭೇರಿ ಭಾರಿಸಿದ ನೂತನ ಶಾಸಕರಾದ ಎಸ್.ಟಿ ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ್ದಾರೆ.
ಕೇವಲ ನೂತನ ಶಾಸಕರು ಮಾತ್ರವಲ್ಲ ಅವರೊಂದಿಗೆ ಕೆಲ ಬಿಜೆಪಿ ನಾಯಕರು ಕೂಡ ಮಠಕ್ಕೆ ಭೇಟಿಕೊಟ್ಟಿದ್ದಾರೆ. ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ ವೇಳೆ ನಿರ್ಮಲಾನಂದ ಸ್ವಾಮೀಜಿಗಳು ಇಬ್ಬರು ಶಾಸಕರು ಬೆಂಗಳೂರು ಅಭಿವೃದ್ಧಿಗೆ ಶ್ರಮಿಸಿ ಎಂದು ಆಶೀರ್ವದಿಸಿದರು. ಇದೇ ವೇಳೆ ಮಾಧ್ಯಮಗಳ ಕೊತೆ ಮಾತನಾಡಿ, ಬಿಜೆಪಿ ನೀಡಿರುವ ಮಾತಿನಂತೆ ಗೆದ್ದ ಶಾಸಕರಿಗೆ ಮಂತ್ರಿ ಮಾಡಲಿದೆ ಎಂಬ ವಿಶ್ವಾಸ ಇದೆ ಎಂದು ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ತಿಳಿಸಿದರು.
Advertisement
Advertisement
ಮಠದಿಂದ ಹೊರಟ ನಂತರ ಸಚಿವ ಸೋಮಣ್ಣ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಶಾಸಕರು ಪರಸ್ಪರ ಮಾತುಕತೆ ನಡೆಸಿದರು. ಈ ವೇಳೆ ಸೋಮಣ್ಣ ಅವರು ಮಾಧ್ಯಮಗಳ ಜೊತೆ ಮಾತನಾಡಿ, ನಮ್ಮ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿದೆ. ಸೋತವರನ್ನ ಕೈ ಬಿಡದೆ ಸೂಕ್ತ ಸ್ಥಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
Advertisement
ಎಸ್.ಟಿ ಸೋಮಶೇಖರ್ ಅವರು 27,686 ಮತಗಳ ಅಂತರದಿಂದ ಗೆಲ್ಲುವ ಮೂಲಕ ಯಶವಂತಪುರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಬಿಜೆಪಿ ಪರವಾಗಿ 1,44,676 ಮತಗಳು ಬಿದ್ದರೆ, ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಜವರಾಯಿಗೌಡ 1,16,990 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಕೇವಲ 15,707 ಮತಗಳನ್ನು ಪಡೆದಿದೆ. ಕಳೆದ ಚುನಾವಣೆಯಲ್ಲಿ ಸೋಮಶೇಖರ್ 10,711 ಮತಗಳಿಂದ ಗೆದ್ದಿದ್ದರು.
Advertisement
ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಭೈರತಿ ಬಸವರಾಜ್ 63,405 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಪರವಾಗಿ 1,39,833, ಕಾಂಗ್ರೆಸ್ ಪರವಾಗಿ 76,428 ಮತಗಳು ಚಲಾವಣೆಯಾದರೆ ಜೆಡಿಎಸ್‍ಗೆ 2,048 ಮತಗಳು ಬಿದ್ದಿದೆ. 2018ರ ಚುನಾವಣೆಯಲ್ಲಿ 32,729 ಮತಗಳಿಂದ ಭೈರತಿ ಬಸವರಾಜ್ ಜಯಗಳಿಸಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ನಂದೀಶ್ ರೆಡ್ಡಿ ಅವರಿಗೆ 1,02,675 ಮತಗಳು ಬಿದ್ದಿತ್ತು.