ಬೆಂಗಳೂರು: 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 (SSLC Results) ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆ ಶೇ.66.14 ಫಲಿತಾಂಶ ಬಂದಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಒಟ್ಟು 5,24,984 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರ ಪೈಕಿ ಬಾಲಕರು 226637 (58.07%), ಬಾಲಕಿಯರು 296438 (74%) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: SSLC Results – ದಕ್ಷಿಣ ಕನ್ನಡ ಫಸ್ಟ್, ಕಲಬುರಗಿ ಲಾಸ್ಟ್ : ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ?
2,24,900 ಮಂದಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು (67.05%) ಹಾಗೂ 2,98,175 ಮಂದಿ ನಗರ ಭಾಗದ ವಿದ್ಯಾರ್ಥಿಗಳು (65.47%) ತೇರ್ಗಡೆಯಾಗಿದ್ದಾರೆ. ಆ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.
ಸರ್ಕಾರಿ- 329, ಅನುದಾನ- 53, ಖಾಸಗಿಯ 539 ಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿವೆ. ಸರ್ಕಾರಿ- 6, ಅನುದಾನ-30, ಖಾಸಗಿಯ 108 ಶಾಲೆಗಳು ಶೂನ್ಯ ಸಂಪಾದನೆ ಮಾಡಿವೆ. ಇದನ್ನೂ ಓದಿ: ಸುಹಾಸ್ ಹತ್ಯೆ ಮಾಡಿದವರಿಗೆ ಕಠಿಣ ಕ್ರಮ ಆಗಲಿದೆ: ಪರಮೇಶ್ವರ್
ಪ್ರಥಮ ಭಾಷೆ- 9573, ದ್ವೀತಿಯ ಭಾಷೆ- 7057, ತೃತೀಯ ಭಾಷೆ- 17909, ಗಣಿತ- 3262, ವಿಜ್ಞಾನ- 2451, ಸಮಾಜ ವಿಜ್ಞಾನ- 7974 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕವನ್ನು ಪಡೆದುಕೊಂಡಿದ್ದಾರೆ.