ಉಡುಪಿ: ವಿಜ್ಞಾನ ಓದಿ ಮುಂದೆ ಗಗನಯಾತ್ರಿ ಆಗಬೇಕು ಎಂಬ ಆಸೆಯಿದೆ ಎಂದು SSLC ಫಸ್ಟ್ ರ‍್ಯಾಂಕ್ ಪಡೆದ ಉಡುಪಿಯ ಭೂಮಿಕಾ ಪೈ ತಿಳಿಸಿದರು.
ಉಡುಪಿ ಜಿಲ್ಲೆ ಕಾಪು ತಾಲೂಕಿನ ಕಟಪಾಡಿ ಮೂಲದವರಾದ ಭೂಮಿಕಾ ಪೈ ಅವರು ಬೆಂಗಳೂರಿನ (Bengaluru) ನ್ಯೂ ಮೆಕಾಲೆ ಸ್ಕೂಲಿನ ವಿದ್ಯಾರ್ಥಿನಿಯಾದ ಅವರು, ಪ್ರಥಮ ಸ್ಥಾನ ಪಡೆದಿರುವುದರ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಅಭಿಪ್ರಾಯವನ್ನು ಹಂಚಿಕೊಂಡರು. ಬರೀ ಓದುತ್ತಲೇ ಇದ್ರೆ 625 ಅಂಕ ಬರುತ್ತಿರಲಿಲ್ಲ. ನಾನು ಚಿಕ್ಕಂದಿನಿಂದಲೂ ಡ್ಯಾನ್ಸರ್ ಹಾಗೂ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದೇನೆ. ಇದರಿಂದಾಗಿ SSLC ಫಸ್ಟ್ ರ‍್ಯಾಂಕ್ ಪಡೆದೆ ಎಂದರು.
Advertisement
Advertisement
ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಕಳೆದ ವರ್ಷಕ್ಕಿಂತ ಸ್ವಲ್ಪ ಫಲಿತಾಂಶ ಕಡಿಮೆಯಾಗಿದೆ. ಎಂದಿನಂತೆ ಬಾಲಕಿಯರು, ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಇದನ್ನೂ ಓದಿ: ಹೆಣ್ಮಕ್ಕಳಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಮಾಡ್ತೀವಿ – ಪ್ರಚಾರದ ಕೊನೇ ದಿನ ಡಿಕೆಶಿ ಗ್ಯಾರಂಟಿ
Advertisement
Advertisement
ಈ ಬಾರಿ 4 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ. ಭೂಮಿಕಾ ಪೈ- ಬೆಂಗಳೂರಿನ ನ್ಯೂ ಮೆಕಾಲೆ ಇಂಗ್ಲಿಷ್ ಸ್ಕೂಲ್ ಹೊಸೂರು ರಸ್ತೆ, ಯಶಸ್ ಗೌಡ – ಬಾಲಗಂಗಾಧರನಾಥ ಹೈಸ್ಕೂಲ್ ಚಿಕ್ಕಬಳ್ಳಾಪುರ, ಅನುಪನಾ ಶ್ರೀಶೈಲ ಹಿರೇಹೋಳಿ- ಕುಮಾರೇಶ್ವರ ಶಾಲೆ ಸವದತ್ತಿ, ಭೀಮನಗೌಡ ಹನುಮಂತಗೌಡ ಪಾಟೀಲ್ – ಆಕ್ಸ್ ಫರ್ಡ್ ಇಂಗ್ಲಿಷ್ ಶಾಲೆ, ಮುದ್ದೇಬಿಹಾಳ ಪ್ರಥಮ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಇದು ನನ್ನ ಕೊನೆಯ ಚುನಾವಣೆ, ಆದರೆ ಸಕ್ರಿಯ ರಾಜಕೀಯದಲ್ಲಿರುತ್ತೇನೆ: ಜಗದೀಶ್ ಶೆಟ್ಟರ್