ಚಿಕ್ಕೋಡಿ: ರೋಟರಿ ಕ್ಲಬ್ ವತಿಯಿಂದ ಎಸ್‍ಎಸ್‍ಎಲ್‍ಸಿ ಪರಿಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆಯನ್ನು ಚಿಕ್ಕೋಡಿಯಲ್ಲಿ ಮಾಡಲಾಗಿದೆ.
ಜುಲೈ 19 ಮತ್ತು 22 ರಂದು ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಅಥಣಿಯ ರೋಟರಿ ಕ್ಲಬ್ ಸಂಸ್ಥೆಯ ವತಿಯಿಂದ ಮಾಸ್ಕ್ ವಿತರಿಸಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ವತಿಯಿಂದ ಏಳು ಸಾವಿರ ಮಾಸ್ಕಗಳನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಯಿತು. ಇದನ್ನೂ ಓದಿ: ಹಾಲ್ ಟಿಕೆಟ್‍ಗಾಗಿ ಶಾಲೆಯ ಮುಂದೆ ಧರಣಿ ಕುಳಿತ SSLC ವಿದ್ಯಾರ್ಥಿ
ಇದೇ ಸಂದರ್ಭದಲ್ಲಿ ಅಥಣಿ ರೋಟರಿ ಕ್ಲಬ್ ಸಂಸ್ಥೆಯ ಗಜಾನನ ಮಂಗಸೂಳಿ ಮಾತನಾಡಿ, ನಮ್ಮ ರೋಟರಿ ಸಂಸ್ಥೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಬಡವರು ನಿರ್ಗತಿಕರು ಸೇರಿದಂತೆ ಹಲವರಿಗೆ ಸಹಾಯ ಹಸ್ತ ಚಾಚುತ್ತ ಬಂದಿದೆ. ಬಹುಮುಖ್ಯವಾಗಿ ಅಥಣಿಯಲ್ಲಿ ರೋಟರಿ ಸಂಸ್ಥೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಡಾಕ್ಟರ್ ಅಮ್ರುತ್ ಕುಲಕರ್ಣಿ, ಖ್ಯಾತ ಚಿಕ್ಕ ಮಕ್ಕಳ ತಜ್ಞ ವೈದ್ಯರಾದ ಪಿಪಿ ಮೀರಜಕರ, ರೋಟರಿ ಸಂಸ್ಥೆಯ ಸದಸ್ಯರಾದ ಅರುಣ ಯಲಗುದ್ರಿ, ಪ್ರಭಾಕರ ಸತ್ತಿ, ಸಚಿನ ದೇಸಾಯಿ, ಬಾಳಪ್ಪಾ ಬುಕಿಟಗಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: ಡಿನ್ನರ್ ಮೀಟಿಂಗ್ ಪಾಲಿಟಿಕ್ಸ್ ನಡುವೆ ಡಿಕೆಶಿ ರಿವೆಂಜ್ ಪಾಲಿಟಿಕ್ಸ್