ಈ ವರ್ಷ ಟ್ರೋಫಿ ಗೆಲ್ಲೋಕೆ ಶ್ರೇಯಸ್‌ ಅಯ್ಯರ್‌ ಅರ್ಹರು – ರಾಜಮೌಳಿ

Public TV
3 Min Read
SS Rajamouli

ಅಹಮದಾಬಾದ್‌: ಮುಂಬೈ ವಿರುದ್ಧ ರೋಚಕ ಗೆಲುವು ಸಾಧಿಸಿರುವ ಪಂಜಾಬ್‌ ಕಿಂಗ್ಸ್‌ 11 ವರ್ಷಗಳ ಬಳಿಕ ಐಪಿಎಲ್‌ ಫೈನಲ್‌ ತಲುಪಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ಪರ ಟ್ರೋಫಿ ತಂದುಕೊಟ್ಟಿದ್ದ ಅಯ್ಯರ್‌ ಈ ಬಾರಿ ಪಂಜಾಬ್‌ ಕಿಂಗ್ಸ್‌ ತಂಡವನ್ನ ಫೈನಲ್‌ವರೆಗೆ ಕೊಂಡೊಯ್ದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಖ್ಯಾತ ಚಲನಚಿತ್ರ ನಿರ್ಮಾಪಕ ಎಸ್‌ಎಸ್‌ ರಾಜಮೌಳಿ (SS Rajamouli), ಟ್ರೋಫಿ ಗೆಲ್ಲಲು ಶ್ರೇಯಸ್‌ ಅಯ್ಯರ್‌ (Shreyas Iyer) ಅರ್ಹರು ಅಂತ ಹೇಳಿದ್ದಾರೆ.

ಬುಮ್ರಾ ಮತ್ತು ಬೌಲ್ಟ್‌ ಅವರ ಯಾರ್ಕರ್‌ಗಳಮನ್ನ ಥರ್ಡ್‌ ಮ್ಯಾನ್ ಬೌಂಡರಿಗಟ್ಟುವ ಶ್ರೇಯಸ್‌ ಅವರ ಸಾಮರ್ಥ್ಯ ಅದ್ಭುತ. ಅಯ್ಯರ್‌ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವನ್ನ ಫೈನಲ್‌ಗೆ ಕೊಂಡೊಯ್ದಿದ್ದರು ಆದ್ರೆ ಫ್ರಾಂಚೈಸಿ ಅವರನ್ನ ಕೈಬಿಟ್ಟಿತು. ಕೋಲ್ಕತ್ತಾ ತಂಡಕ್ಕೆ ಟ್ರೋಫಿ ತಂದುಕೊಟ್ಟರು, ಆದ್ರೂ ಫ್ರಾಂಚೈಸಿ ಅವರನ್ನ ಕೈಬಿಟ್ಟಿತು. ಇದೀಗ 11 ವರ್ಷಗಳ ಬಳಿಕ ಪಂಜಾಬ್‌ ತಂಡವನ್ನ ಫೈನಲ್‌ಗೆ ಕರೆದೊಯ್ದಿದ್ದಾರೆ, ಈ ವರ್ಷದ ಟ್ರೋಫಿಗೆ ಅವರು ಅರ್ಹರು ಅಂತ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಂಸದೆ ಜೊತೆ ಎಂಗೇಜ್‌ಮೆಂಟ್‌ ಆಗ್ತಿದ್ದಾರೆ ರಿಂಕು ಸಿಂಗ್‌ – ಕ್ರಿಕೆಟಿಗನ ಕೈ ಹಿಡಿಯೋ ಚೆಲುವೆ ಯಾರು?

ಮುಂದುವರಿದು… ಮತ್ತೊಂದೆಡೆ, ವಿರಾಟ್‌ ಕೊಹ್ಲಿ (Virat Kohli) ವರ್ಷದಿಂದ ವರ್ಷಕ್ಕೆ ಪ್ರದರ್ಶನ ನೀಡುತ್ತಿದ್ದಾರೆ. ಸಾವಿರಾರು ಕಲೆಹಾಕಿದ್ದಾರೆ. ಅವರೂ ಕೂಡ ಈ ಟ್ರೋಫಿಗೆ ಅರ್ಹರು. ಫಲಿತಾಂಶ ಏನೇ ಇರಲಿ…. ಹೃದಯ ವಿದ್ರಾವಕವಾಗಲಿದೆ ಎಂದು ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಏಕದಿನಕ್ಕೆ ಆಸೀಸ್‌ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ ದಿಢೀರ್‌ ನಿವೃತ್ತಿ

shreyas iyer Rajat Patidar

ಮಳೆಯಿಂದ 2 ಗಂಟೆ 15 ನಿಮಿಷ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಮುಂಬೈ 6 ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಇನ್ನೂ 6 ಎಸೆತ ಇರುವಂತೆಯೇ 5 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿಸಿ ಜಯ ಸಾಧಿಸಿತು.

ಪ್ರಿಯಾಂಶ್‌ ಆರ್ಯ 20 ರನ್‌, ಪ್ರಭುಸಿಮ್ರಾನ್‌ ಸಿಂಗ್‌ 6 ರನ್‌, ಬುಮ್ರಾ ಮೊದಲ ಓವರ್‌ನಲ್ಲಿ 20 ರನ್‌ ಹೊಡೆದ ಜೋಶ್‌ ಇಂಗ್ಲಿಸ್‌ 38 ರನ್‌(21 ಎಸೆತ, 5 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದಾಗ ಪಂಜಾಬ್‌ ಸ್ಕೋರ್‌ 3 ವಿಕಟ್‌ ನಷ್ಟಕ್ಕೆ 72 ರನ್‌ ಗಳಿಸಿತ್ತು. ಇದನ್ನೂ ಓದಿ: ಈ ಬಾರಿ ಐಪಿಎಲ್‌ನಲ್ಲಿ ಹೊಸ ಚಾಂಪಿಯನ್‌ – ಹಿಂದಿನ ಆರ್‌ಸಿಬಿ, ಪಂಜಾಬ್‌ ಫೈನಲ್‌ ಪಂದ್ಯಗಳು ಹೇಗಿತ್ತು?

ಒಂದು ಹಂತದಲ್ಲಿ ಸಂಕಷ್ಟದಲ್ಲಿದ್ದರೂ ಶ್ರೇಯಸ್‌ ಅಯ್ಯರ್‌ ಮತ್ತು ನೆಹಲ್‌ ವಧೇರಾ 47 ಎಸೆತಗಳಲ್ಲಿ 84 ರನ್‌ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು. ವಧೇರಾ 48 ರನ್‌(29 ಎಸೆತ, 4 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದರೆ ನಾಯಕನ ಆಟವಾಡಿದ ಶ್ರೇಯಸ್‌ ಅಯ್ಯರ್‌ ಔಟಾಗದೇ 87 ರನ್‌(41 ಎಸೆತ, 5 ಬೌಂಡರಿ, 8 ಸಿಕ್ಸ್‌) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು. ಅತ್ಯುತ್ತಮ ಆಟವಾಡಿ ತಂಡವನ್ನು ಗೆಲ್ಲಿಸಿಕೊಟ್ಟ ಶ್ರೇಯಸ್‌ ಅಯ್ಯರ್‌ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

tilak varma suryakumar yadav

11 ವರ್ಷಗಳ ಬಳಿಕ ಫೈನಲ್‌:
ಪಂಜಾಬ್ ಐಪಿಎಲ್‌ನಲ್ಲಿ 2ನೇ ಬಾರಿ ಐಪಿಎಲ್‌ನಲ್ಲಿ ಫೈನಲ್‌ ಪ್ರವೇಶಿಸಿದೆ. 2014 ರಲ್ಲಿ ಕೋಲ್ಕತ್ತಾ ವಿರುದ್ಧ ಫೈನಲ್‌ನಲ್ಲಿ ಸೋತು ಪಂಜಾಬ್‌ ರನ್ನರ್‌ ಅಪ್‌ ಅಗಿತ್ತು. ಇದನ್ನೂ ಓದಿ: ಮುಂಬೈ ವಿರುದ್ಧ ಪಂಜಾಬ್‌ಗೆ ಜಯ – ಐಪಿಎಲ್‌ನಲ್ಲಿ ನಾಳೆ ಆರ್‌ಸಿಬಿ Vs ಕಿಂಗ್ಸ್‌ ಫೈನಲ್‌

Share This Article