ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕ ರಾಜಮೌಳಿ ಡೈರೆಕ್ಷನ್‌ನಲ್ಲಿ ‘ಆರ್‌ಆರ್‌ಆರ್’ (RRR) ಸಿನಿಮಾ ಗೆದ್ದು ಬೀಗಿರೋದು ಗೊತ್ತೆ ಇದೆ. ಚಿತ್ರದ ನಾಟು ನಾಟು (Naatu Naatu) ಹಾಡಿಗೆ ಆಸ್ಕರ್ ಗೌರವ ಕೂಡ ದಕ್ಕಿದೆ. ಇಷ್ಟೆಲ್ಲಾ ಸಾಧನೆ ಮಾಡಿರೋ ಟೀಮ್ ಕಡೆಯಿಂದ ಆರ್‌ಆರ್‌ಆರ್ ಪಾರ್ಟ್ 2 (Part 2) ಬಗ್ಗೆ ಫ್ಯಾನ್ಸ್ ನಿರೀಕ್ಷೆ ಮಾಡ್ತಿದ್ದಾರೆ. ಅಷ್ಟಕ್ಕೂ ‘ಆರ್‌ಆರ್‌ಆರ್’ ಸೀಕ್ವೆಲ್ ಬರುತ್ತಾ ಎಂಬುದನ್ನ ರಾಜಮೌಳಿ (Rajamouli) ತಂದೆ ಮಾಹಿತಿ ಬಿಚ್ಚಿಟ್ಟಿದ್ದಾರೆ.
ರಾಮ್ ಚರಣ್- ಜ್ಯೂ.ಎನ್‌ಟಿಆರ್ (Jr.Ntr) ಜೋಡಿ ಸಿನಿಮಾದಲ್ಲಿ ಕಮಾಲ್ ಮಾಡಿದ್ರು. ಆಲಿಯಾ ಭಟ್ (Alia Bhatt) ಕೂಡ ಸಾಥ್ ನೀಡಿದ್ದರು. ರಾಜಮೌಳಿ ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಟ್ರಯೋ ಜೋಡಿಯನ್ನ ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. ಈ ಬಗ್ಗೆ ವಿಜಯೇಂದ್ರ ಪ್ರಸಾದ್ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಜಿಮ್ ವರ್ಕೌಟ್‌ನೇ ಪಾರ್ಟಿ ಎಂದ ನಟಿ- ಸಮಂತಾ ಬಾಲಿ ಡೈರೀಸ್
‘ಆರ್‌ಆರ್‌ಆರ್’ ಸೀಕ್ವೆಲ್‌ನ ರಾಜಮೌಳಿ (Rajamouli) ನಿರ್ದೇಶನ ಮಾಡುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಈ ಪ್ರಶ್ನೆಗೆ ಹೌದು, ಇಲ್ಲ ಎಂಬ ಎರಡೂ ಉತ್ತರ ನೀಡಬಹುದು. ಈ ಚಿತ್ರದ ಸೀಕ್ವೆಲ್ ಬಗ್ಗೆ ಅವರ ಬಳಿ ಮಾತನಾಡಿದ್ದೇನೆ. ಸಿನಿಮಾದ ಕಥೆ ಆಫ್ರಿಕಾದಲ್ಲಿ ಸಾಗುತ್ತದೆ ಎಂದು ವಿಜಯೇಂದ್ರ ಪ್ರಸಾದ್(Vijendra Prasad) ತಿಳಿಸಿದ್ದಾರೆ.
ಸದ್ಯ ಮಹೇಶ್ ಬಾಬು (Mahesh Babu) ಅವರು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಮುಗಿದ ಮೇಲೆ ಅವರ ಜೊತೆ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾ ಮುಗಿಯುವವರೆಗೂ ಅವರು ಸೀಕ್ವೆಲ್ ಬಗ್ಗೆ ಆಲೋಚಿಸುವುದಿಲ್ಲ. ಒಂದೊಮ್ಮೆ ಅವರಿಗೆ ಕಥೆ ಇಷ್ಟವಾದರೆ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ (Ramcharan) ಕಾಲ್‌ಶೀಟ್ ಸಿಗಬೇಕು ಎಂದು ಅವರು ಹೇಳಿದ್ದಾರೆ. ಒಟ್ನಲ್ಲಿ ಆರ್‌ಆರ್‌ಆರ್ ಪಾರ್ಟ್ ಮಾಡಿದ್ದರು ಮಾಡಬಹುದು ಸದ್ಯಕ್ಕೆ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ರಾಜಮೌಳಿ ತಂದೆ ತಿಳಿಸಿದ್ದಾರೆ.