ದಾವಣಗೆರೆ: ಹೊರಗಿನಿಂದ ಬಂದವರು ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆ. ಮೊದಲು ಅವರನ್ನು ಜಿಲ್ಲೆಯಿಂದ ಹೊರ ಓಡಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರಿಗೆ ಸಚಿವ ಎಸ್‍ಎಸ್ ಮಲ್ಲಿಕಾರ್ಜುನ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಅಭಿವೃದ್ಧಿಯಾಗಬೇಕು ಅಂದ್ರೆ ಅರ್ಜುನನ ರೀತಿ ಕೆಲಸ ಮಾಡಬೇಕು. ಅವರು ಜಿಲ್ಲೆಗೆ ಶಕುನಿಯಾಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ದಾಖಲೆ ಸಹಿತ ಚರ್ಚೆಗೆ ನಾನು ಸಿದ್ಧ ಎಂದು ಸಂಸದ ಸಿದ್ದೇಶ್ವರ್ ಅವರನ್ನ ಚರ್ಚೆಗೆ ಬರುವಂತೆ ಆಹ್ವಾನಿಸಿದ್ರು.
Advertisement
ಮುಂದಿನ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ನಾಲ್ಕುವರೆ ವರ್ಷದಲ್ಲಿ ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ 2,499 ಕೋಟಿ ರೂ. ಅನುದಾನ ತಂದಿದ್ದು, ಇದರಲ್ಲಿ 1036 ಕೋಟಿ ರೂ. ಕೆಲಸವಾಗಿದೆ. 1462 ಕೋಟಿ ರೂ. ಕೆಲಸ ಬಾಕಿ ಇದೆ. ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿ ಮೂರು ವರ್ಷವಾದರೂ ಕೇಂದ್ರದಿಂದ ಅನುದಾನ ಬಂದಿಲ್ಲ. ರಾಜ್ಯ ಸರ್ಕಾರ ಮಾತ್ರ ಅನುದಾನ ಬಿಡುಗಡೆ ಮಾಡಿದೆ ಅಷ್ಟೇ ಅಂದ್ರು.