ರಾಯಚೂರು: ಸಿದ್ದರಾಮಯ್ಯನವರಿಗೆ (Siddaramaiah) ತಾವು ಅಹಿಂದ ನಾಯಕ ಅನ್ನೋದು ಪಂಚವಾರ್ಷಿಕ ಯೋಜನೆ ತರ ಐದು ವರ್ಷಗಳಿಗೊಮ್ಮೆ ನೆನಪಿಗೆ ಬರುತ್ತೆ ಎಂದು ಸಚಿವ ಶ್ರೀರಾಮುಲು (SriRamulu) ಕುಟುಕಿದ್ದಾರೆ.
Advertisement
ರಾಯಚೂರಿನಲ್ಲಿಂದು (Raichur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಳ ಸಮುದಾಯದವರಿಗೆ ಮೀಸಲಾತಿ (Reservation) ಕೊಡುವ ವಿಚಾರದಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ. ಪ್ರಿನ್ಸಿಪಲ್ ಸೆಕ್ರೆಟರಿ ಜಾದವ್ ಅವರು ವರದಿ ಕೊಟ್ಟಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದರೂ ಆಯೋಗ ರಚನೆ ಮಾಡಲಿಲ್ಲ. ಎಸ್ಸಿ-ಎಸ್ಟಿಗೆ ಮೀಸಲಾತಿ (SCST Reservation) ಹೆಚ್ಚಿಸುವ ಕೆಲಸ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡ್ತಿರೋರು ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟರು: ಕಟೀಲ್ ಕಿಡಿ
Advertisement
Advertisement
ಹಿಂದುಳಿದವರ, ಅಹಿಂದ ನಾಯಕರು ಅಂತ ಕರೆಯಿಸಿ ಕೊಳ್ಳುವ ಅರ್ಹತೆ ಸಿದ್ದರಾಮಯ್ಯ (Siddaramaiah) ಅವರಿಗೆ ಇಲ್ಲ. ಅದು ಏನಿದ್ದರೂ ಬಸವರಾಜ ಬೊಮ್ಮಾಯಿ ಅವರಿಗೆ ಮಾತ್ರ. ಹೀಗಾಗಿ ಸಿಎಂಗೆ ಅಭಿನಂದನೆ ಸಲ್ಲಿಸಲು ನವೆಂಬರ್ 20ಕ್ಕೆ ಬಳ್ಳಾರಿಯಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ
Advertisement
ಸಿದ್ದರಾಮಯ್ಯ ಮಹಾ ಸುಳ್ಳ, ಅವರ ಮನೆ ದೇವರ ಹೆಸರೇ ಮಹಾ ಸುಳ್ಳ. ಆತ ಯಾವ ಮಾತು ಉಳಿಸಿಕೊಂಡಿಲ್ಲ. ಇಡೀ ರಾಜ್ಯದ ಹಿಂದುಳಿದ ಜಾತಿಯವರು ರೋಸಿ ಹೋಗಿದ್ದಾರೆ. ಎಸ್ಸಿ-ಎಸ್ಟಿ ಜನಾಂಗದವರೂ ಅವರನ್ನ ನಂಬಲ್ಲ. ಮುಂದಿನ ಚುನಾವಣೆಯಲ್ಲಿ ಜನರೇ ಸಿದ್ದರಾಮಯ್ಯರನ್ನ ತಿರಸ್ಕಾರ ಮಾಡ್ತಾರೆ ಎಂದು ಭವಿಷ್ಯ ನುಡಿದರು.