LatestLeading NewsMain PostNational

ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

ಗಾಂಧಿನಗರ: ಗುಜರಾತಿನ ಮೋರ್ಬಿ (Gujarat Morbi Bridge) ಜಿಲ್ಲೆಯಲ್ಲಿ ಸಂಭವಿಸಿದ ತೂಗು ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಇದರೊಂದಿಗೆ 100 ಮಂದಿ ನಾಪತ್ತೆಯಾಗಿದ್ದು, ತೀವ್ರ ಶೋಧಕಾರ್ಯ ನಡೆಯುತ್ತಿದೆ. ಈ ವೇಳೆ ಪ್ರಧಾನಿ ಮೋದಿ (Narendra Modi) ತವರಿನಲ್ಲಿ ನಡೆದ ಭೀಕರ ದುರಂತವನ್ನು 2016ರ ಮಧ್ಯ ಕೋಲ್ಕತ್ತಾದಲ್ಲಿ ನಡೆದ ಮೇಲ್ಸೇತುವೆ (Flyover) ಕುಸಿತಕ್ಕೆ ಹೋಲಿಸಿ ಟೀಕೆ ಮಾಡಲಾಗುತ್ತಿದೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

2016ರಲ್ಲಿ ಪಶ್ಚಿಮ ಬಂಗಾಳದ ಚುನಾವಣಾ (West Bengal Election) ಸಂದರ್ಭದಲ್ಲಿ ಕೋಲ್ಕತ್ತಾದ ವಿವೇಕಾನಂದ ನಗರದ ಮೇಲ್ಸೇತುವೆ ಕುಸಿತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿ ಅವರು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಸೇತುವೆ ಕುಸಿದ ಬಳಿಕ ಇದು ದೇವರ ಕಾರ್ಯ. ಇದು ಮೋಸದ ಕೃತ್ಯ, ವಂಚನೆಯ ಪರಿಣಾಮ, ಚುನಾವಣೆಯ ಸಮಯದಲ್ಲೇ ಕುಸಿದು ಬಿದ್ದಿದೆ. ನೀವು ಯಾವ ರೀ ಸರ್ಕಾರ ನಡೆಸುತ್ತೀದ್ದೀರಿ. ಇದು ನಿಜವಾಗಿಯೂ ಜನರಿಗೆ ದೇವರು ಕೊಟ್ಟ ಸಂದೇಶವಾಗಿದೆ ಎಂದು ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನ ಟೀಕಿಸಿದ್ದರು.

ಅವರು ಎಡಪಂಥೀಯರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಎಡ-ಬಲ ಹೇಗಾದರೂ ಇರಲಿ. ಮೊದಲು ಸಾಯುತ್ತಿರುವವರ ಬಗ್ಗೆ ಯೋಚಿಸಿ, ಸತ್ತವರನ್ನು ಗೌರವಿಸಿ ಎಂದು ಮೋದಿ ಕಿಡಿಕಾರಿದ್ದರು. ಈ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪ್ರತಿಪಕ್ಷದ ನಾಯಕರು ಪ್ರಧಾನಿ ಮೋದಿ ಅವರೇ ಇಂದು ನಿಮ್ಮ ತವರಿನಲ್ಲೇ ನಡೆದಿರುವ ಘಟನೆಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಜಯಪುರ ನಗರಪಾಲಿಕೆ ಚುನಾವಣೆ – ಬಿಜೆಪಿಗೆ ಸಿಂಹಪಾಲು

ಟಿಎಂಸಿ (TMC) ನಾಯಕ ಮತ್ತು ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಟ್ವೀಟ್ (Twitter) ಮಾಡಿದ್ದು, ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ನಿಂದಿಸಿದ್ದೀರಿ. ಈಗ ಗುಜರಾತ್‌ನಲ್ಲಿ ಹೊಸದಾಗಿ ನವೀಕರಿಸಿದ ಸೇತುವೆ ಕುಸಿತು 141 ಜನ ಸಾವನ್ನಪ್ಪಿದ್ದಾರೆ. ಮೋದಿ ಜೀ ಅವರೇ ಸತ್ತವರ ಬಗ್ಗೆ ಕೆಲವು ಹನಿ ಕಣ್ಣೀರು ಇರಲಿ ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಇನ್ನೂ 2016ರ ಘಟನೆಯನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಶಿವಸೇನಾ (Shivsena) ಸಂಸದೆ ಪ್ರಿಯಾಂಕಾ ಚತುರ್ವೇದಿ (Priyanka Chaturvedi), ಪಶ್ಚಿಮ ಬಂಗಾಳದಲ್ಲಿ ಸೇತುವೆ ಕುಸಿದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇದು ದೇವರ ಕಾರ್ಯ, ವಂಚನೆಯ ಕೃತ್ಯ ಎಂದು ಹೇಳಿದ್ದನ್ನು ಗುಜರಾತಿನ ಘಟನೆ ನೆನಪಿಸುತ್ತದೆ ಎಂದು ಬರೆದು, 2016 ಘಟನೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ಸೇತುವೆಯನ್ನು ಅಲುಗಾಡಿಸಿದ್ದೆ ದುರಂತಕ್ಕೆ ಕಾರಣ: ಪ್ರತ್ಯಕ್ಷದರ್ಶಿ

2016ರ ಮಾರ್ಚ್ 31ರಂದು ಮಧ್ಯ ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು 30 ಜನರು ಸಾವನ್ನಪ್ಪಿದ್ದರು. ಚುನಾವಣಾ ಸಂದರ್ಭದಲ್ಲಿ ನಡೆದಿದ್ದರಿಂದ ಪ್ರತಿ ಪಕ್ಷಗಳು ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದವು.

Live Tv

Leave a Reply

Your email address will not be published. Required fields are marked *

Back to top button