– ಸಿಎಂ ಕುರ್ಚಿಗೆ ಕಂಟಕ ಬಂದಾಗ ಜಾತಿಗಣತಿ ಪ್ರಸ್ತಾಪ ಎಂದು ಕಿಡಿ
ಕಲಬುರಗಿ: ತಮ್ಮ ಮಗನನ್ನ ಸಿಎಂ ಮಾಡಲು ಮಲ್ಲಿಕಾರ್ಜುನ ಖರ್ಗೆಯವರೇ (Mallikarjuna Kharge) ಈ ಸರ್ಕಾರ ಬಿಳಿಸುತ್ತಾರೆ ಎಂದು ಮಾಜಿ ಸಚಿವ ಶ್ರೀರಾಮುಲು (Sriramulu) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ (Kalaburagi) ನಡೆದ ಜನಾಕ್ರೋಶ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್ (D K Shivakumar) ಈಗಾಗಲೇ ಸಿಎಂ ಗಾದಿಗೆ ಫೈಟ್ ಮಾಡುತ್ತಿದ್ದಾರೆ. ಇದರ ನಡುವೆಯೇ ಮೂರನೇ ವ್ಯಕ್ತಿ ಪ್ರವೇಶ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ಸಿಎಂ ಮಾಡಲು ಅವರೇ ಸರ್ಕಾರವನ್ನ ಬೀಳಿಸುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಮಂಡ್ಯ | ಜೀವನೋಪಾಯಕ್ಕಿದ್ದ ಗೂಡ್ಸ್ ಆಟೋಗೆ ದುಷ್ಕರ್ಮಿಗಳಿಂದ ಬೆಂಕಿ – 7 ಲಕ್ಷ ನಷ್ಟ
ಮೊನ್ನೆ ಖರ್ಗೆ ಅವರು ಸರ್ಕಾರ ಬೀಳುವ ಬಗ್ಗೆ ಮಾತನಾಡಿದ್ದಾರೆ. ಮೋದಿಯವರು ಈ ಸರ್ಕಾರ ಬಿಳಿಸುತ್ತಾರೆ ಎಂದು ಹೇಳಿದ್ದಾರೆ. ಮೋದಿಯವರಿಗೆ ಏನು ಕರ್ಮ ಈ ಸರ್ಕಾರ ಬಿಳಿಸೋಕೆ. ಇಬ್ಬರ ಕಾದಾಟದಲ್ಲಿ ತಮ್ಮ ಮಗನನ್ನ ಸಿಎಂ ಮಾಡಲು ಖರ್ಗೆಯವರೇ ಪ್ಲ್ಯಾನ್ ಮಾಡಿದ್ದಾರೆ ಎಂದು ಗುಡುಗಿದರು. ಇದನ್ನೂ ಓದಿ: ಮೋದಿ, ಎಲಾನ್ ಮಸ್ಕ್ ಸಂಭಾಷಣೆ – ಸ್ಟಾರ್‌ಲಿಂಕ್ ಭಾರತಕ್ಕೆ ಬರುತ್ತಾ?
ತಂದೆ, ಮಕ್ಕಳು ಸೇರಿ ರಿಪಬ್ಲಿಕ್ ಆಫ್ ಕಲಬುರಗಿಯನ್ನಾಗಿ ಮಾಡಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರು ಅಲ್ಲಿಗೆ ಭೇಟಿ ಕೊಟ್ಟರೇ ಅವರ ಕಾರ್ಯಕರ್ತರು ದಬ್ಬಾಳಿಕೆ ಮಾಡುತ್ತಾರೆ. ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ. ನಿನ್ನೆ ಜಾತಿಗಣತಿ ಬಗ್ಗೆ ನಿರ್ಧಾರ ಮಾಡುವುದಿಲ್ಲ ಎಂದು ಗೊತ್ತಿತ್ತು. ಹೀಗಾಗಿ ಪಲಾಯನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಂಗಳೂರು, ಬೆಂಗಳೂರಲ್ಲಿ ಅದ್ದೂರಿ ಪಸ್ಕ ಹಬ್ಬ ಆಚರಣೆ – ಮಂಜೂಷ ಪೆಟ್ಟಿಗೆ ಸ್ಥಾಪನೆ
ಸಿಎಂ ಕುರ್ಚಿಗೆ ಕಂಟಕ ಬಂದಾಗ ಜಾತಿಗಣತಿ ಪ್ರಸ್ತಾಪ ಮಾಡುತ್ತಾರೆ. ಅವರ ಕೈಯಲ್ಲಿ ಆಗೋದು ಅಷ್ಟೇ. ಮುಂದೆ ಒಂದು ಕಮಿಟಿ ನೇಮಕ ಮಾಡಿ ವರದಿ ತರಿಸಿಕೊಳ್ಳುತ್ತೇವೆ ಎನ್ನುತ್ತಾರೆ. ಈ ಸರ್ಕಾರ ಸುಮ್ಮನೇ ಕಾಲಹರಣ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದರು.