ಬೆಂಗಳೂರು: ಕರ್ನಾಟಕ ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಬಿಜೆಪಿ ಭದ್ರಕೋಟೆ ಅಂತಾನೇ ಕರೆಸಿಕೊಳ್ಳುವ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ವಶ ಪಡಿಸಿಕೊಳ್ಳಲು ಕಾಂಗ್ರೆಸ್ ಚುನಾವಣಾ ತಂತ್ರವನ್ನು ಅನುಸರಿಸುತ್ತಿದೆ. ಇತ್ತ ಕಾಂಗ್ರೆಸ್ ಗೆ ತಿರುಗೇಟು ನೀಡಲು ಶಾಸಕ ಶ್ರೀರಾಮುಲು ತೆರೆಮರೆಯಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗುತ್ತಿದ್ದಾರೆ ಎಂಬ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆಗಿದ್ದರಿಂದ ಜೆಡಿಎಸ್ ಅಭ್ಯರ್ಥಿ ಬಳ್ಳಾರಿಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಉಪ ಚುನಾವಣೆಯಲ್ಲಿ ಜೆಡಿಎಸ್ ತನ್ನ ಸಂಪೂರ್ಣ ಬೆಂಬಲವನ್ನು ಕಾಂಗ್ರೆಸ್ ಗೆ ನೀಡಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಹೆಸರು ಅಧಿಕೃತವಾಗಿದೆ. ಬಿಜೆಪಿಯಿಂದ ಶ್ರೀರಾಮುಲು ಸೋದರಿ ಜೆ.ಶಾಂತಾ ಮತ್ತು ಕಾಂಗ್ರೆಸ್‍ನಿಂದ ಎಂಎಲ್‍ಸಿ ಉಗ್ರಪ್ಪ ಸ್ಬರ್ಧೆ ಮಾಡಲಿದ್ದಾರೆ. ಶಾಸಕ ನಾಗೇಂದ್ರ ಪ್ರಸಾದ್ ಸಹೋದರ ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ಎಂಬುವುದು ಬಹುತೇಕ ಖಚಿತವಾಗಿತ್ತು. ಜಿಲ್ಲೆಯ ಶಾಸಕರಲ್ಲಿ ಒಮ್ಮತ ಮೂಡದ ಕಾರಣ ಹೈಕಮಾಂಡ್ ಉಗ್ರಪ್ಪರ ಹೆಸರು ಅಂತಿಮಗೊಳಿಸುವ ಹಸ್ತ ಪಾಳಯದ ಸಂಚಲನ ಮೂಡಿಸಿತ್ತು.
Advertisement
Advertisement
ಟಿಕೆಟ್ ವಂಚಿತರಾಗುವ ವೆಂಕಟೇಶ್ ಪ್ರಸಾದ್ ಸೋದರ ನಾಗೇಂದ್ರ ಬಂಡಾಯ ಏಳುವ ಸಾಧ್ಯತೆಗಳಿದ್ದು, ಇತ್ತ ಹೊಸಪೇಟೆ ಶಾಸಕ ಆನಂದ್ ಸಿಂಗ್ ಸಹ ಸಚಿವ ಸ್ಥಾನ ಸಿಗದೇ ಇರುವ ಅಸಮಾಧಾನಿತರಲ್ಲಿ ಒಬ್ಬರಾಗಿದ್ದಾರೆ. ಕರ್ನಾಟಕ ಉಪ ಚುನಾವಣೆ ವೇಳೆಯಲ್ಲಿಯೇ ನಾಗೇಂದ್ರ ಮತ್ತು ಆನಂದ್ ಸಿಂಗ್ ಇಬ್ಬರನ್ನು ಬಿಜೆಪಿಗೆ ಸೆಳೆಯುವಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ನಿರತರಾಗಿದ್ದಾರಂತೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv