ಬಳ್ಳಾರಿ: ಮೊದಲು ನಾನೂ ಗೂಂಡಾಗಿರಿ ಮಾಡ್ತಿದ್ದೆ, ತುಂಬಾ ಜಗಳ ಮಾಡ್ತಿದ್ದೆ. ಬಡವರಿಗೆ ಯಾರಾದ್ರೂ ತೊಂದರೆ ಕೊಟ್ಟಾಗ ಮಾತ್ರ ಗೂಂಡಾಗಿರಿ ಮಾಡುತ್ತಾ, ಅವರ ಪರವಾಗಿ ನಿಲ್ಲುತ್ತಿದೆ. ಬಡವರ ಪರವಾಗಿ ನಿಂತು ಜಗಳವಾಡಿ 14-15 ಬಾರಿ ಜೈಲಿಗೂ ಹೋಗಿದ್ದೆ ಎಂದು ಸಚಿವ ಶ್ರೀರಾಮುಲು (Sriramulu) ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ವೀರಶೈವ ವಿದ್ಯಾವರ್ಧಕ ಸಂಘದ ಎಸ್‌ಜಿ ಕಾಲೇಜಿನ (SG College) ಅಮೃತ ಮಹೋತ್ಸವ ಮತ್ತು ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: Breaking News- ಅನಿರುದ್ಧ ಬ್ಯಾನ್ ವಿಚಾರ: ಫಿಲ್ಮ್ ಚೇಂಬರ್ ಗೆ ಬಾರದಿರಲು ನಿರ್ಮಾಪಕರ ಸಂಘ ನಿರ್ಧಾರ
ನಾನೂ ಗೂಂಡಾಗಿರಿ ಮಾಡ್ತಿದ್ದೆ. ಯಾರಾದರೂ ಬಡವರಿಗೆ ತೊಂದರೆ ಕೊಟ್ಟಾಗ ಮಾತ್ರ ಅವರ ಪರವಾಗಿ ನಿಂತು ಜಗಳವಾಡುತ್ತಿದೆ. ಅದಕ್ಕಾಗಿ ಜೈಲಿಗೂ ಹೋಗಿ ಬಂದಿದ್ದೇನೆ. ನಮ್ಮಪ್ಪ ವಕೀಲರ (Lawyer) ಬಳಿ ಬೇಲ್ ಕೇಳೋದಕ್ಕೆ ಹೋದಾಗಲೆಲ್ಲಾ ಎಷ್ಟು ಬಾರಿ ಬೇಲ್ ಕೊಡಬೇಕು ಅವನಿಗೆ ಎಂದು ಸಿಡಿಮಿಡಿಗೊಳ್ಳುತ್ತಿದ್ದರು. ಅಲ್ಲದೇ ನಿಮ್ಮಪ್ಪನಿಂದಲೇ ನಾನು ದುಡಿಯೋದಕ್ಕೆ ಹೋಗ್ತಿದ್ದೀನಿ ಅಂತ ವಕೀಲರು ನನ್ನ ಬಳಿ ಹೇಳ್ತಿದ್ದರು. ಇಂತಹ ನೆನಪುಗಳನ್ನು ನಾವು ಮರೆಯಬಾರದು ಎಂದು ಮುಗುಳ್ನಕ್ಕರು. ಇದನ್ನೂ ಓದಿ: ಜನಾರ್ದನ ರೆಡ್ಡಿ ನನ್ನ ಆಪ್ತಮಿತ್ರ, ಸ್ನೇಹಕ್ಕಾಗಿ ಪ್ರಾಣ ಕೊಡಲು ಸಿದ್ಧ: ಶ್ರೀರಾಮುಲು
ನಾನು ಜೀನ್ಸ್‌ಪ್ಯಾಂಟ್ (Jeans Pant) ಹಾಕಿಕೊಂಡು ಹೋದ್ರೆ ಹುಡುಗೀರೆಲ್ಲಾ ನನ್ನನ್ನೇ ನೋಡ್ತಿದ್ರು. ಆದ್ರೆ ನಾನು ಬೇರೆಕಡೆ ಹೋಗಿ ಮಾತನಾಡುತ್ತಿರಲಿಲ್ಲ. ನಮ್ಮೂರಿನಲ್ಲಿ ಮಾತ್ರ ಮಾತನಾಡುತ್ತಿದೆ. ನೀವೇ ಹೇಳಿ ನಾನು ಮಾತನಾಡಿದ್ದು ತಪ್ಪಾ? ಎಂದು ಸಭೀಕರನ್ನೇ ಪ್ರಶ್ನಿಸಿದರು.
ನಾನು ಪರೀಕ್ಷೆಯಲ್ಲಿ ಕಾಪಿ ಹೊಡೆದು ಪಾಸಾಗಿದ್ದೇನೆ, ಕಾಪಿ ಹೊಡೆಯುವುದಲ್ಲಿ ಪಿಹೆಚ್‌ಡಿ (PHD) ಮಾಡಿದ್ದೇನೆ ಎಂದು ಮನಬಿಚ್ಚಿ ಮಾತನಾಡಿದ ಶ್ರೀರಾಮುಲು ತಮ್ಮ ಶಿಕ್ಷಕರನ್ನು ಸ್ಮರಿಸಿದರು.