ಬೆಂಗಳೂರು: ವಿಧಾನ ಪರಿಷತ್‍ನಲ್ಲಿ ಕೊರೊನಾ ಕುರಿತ ಚರ್ಚೆಯ ವೇಳೆ ಹಲವು ಟೆಕ್ ಕಂಪನಿಗಳಿರುವ ಮಾನ್ಯತಾ ಟೆಕ್ ಪಾರ್ಕಿಗೆ ರಜೆ ನೀಡುವ ಆಗ್ರಹ ಕೇಳಿ ಬಂತು.
ಮಾನ್ಯತಾ ಟೆಕ್ ಪಾರ್ಕಿನಲ್ಲಿ ಒಂದು ಪಾಸಿಟಿವ್ ಕೇಸ್ ಬಂದಿದೆ. ಹೀಗಿದ್ದರೂ ಮಾನ್ಯತಾ ಟೆಕ್ ಪಾರ್ಕಿಗೆ ರಜೆ ಘೋಷಣೆ ಮಾಡಿಲ್ಲ. ಕೂಡಲೇ ಟೆಕ್ ಪಾರ್ಕಿಗೆ ರಜೆ ಘೋಷಿಸಿ ಎಂದು ರಮೇಶ್ ಗೌಡ ಒತ್ತಾಯ ಮಾಡಿದರು.
Advertisement
Advertisement
ಮಾನ್ಯತಾ ಟೆಕ್ ಪಾರ್ಕಿನಲ್ಲಿ ಪಾಸಿಟಿವ್ ಆಗಿದೆ ಅನ್ನೋದು ಸುಳ್ಳು ಸುದ್ದಿ. ಭಯ ಹುಟ್ಟಿಸುವ ಕೆಲಸ ಮಾಡಬೇಡಿ. ವರದಿ ಬಂದ ನಂತರ ಬೇಕಾದರೆ ನೋಡೋಣ. ಮಾನ್ಯತಾ ಟೆಕ್ ಪಾರ್ಕಿನಲ್ಲಿ ಯಾವುದೇ ಕೇಸ್ ಪಾಸಿಟಿವ್ ಬಂದಿಲ್ಲ ಎಂದು ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದರು.
Advertisement
ಕೊರೊನಾ ಬಗ್ಗೆ ಪರಿಷತ್‍ನಲ್ಲಿ ಮಾತನಾಡಿದ ಶ್ರೀರಾಮುಲು, ಇವತ್ತು ಒಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಇವತ್ತಿಗೆ 15 ಕೊರೊನಾ ಪ್ರಕರಣ ದೃಢಪಟ್ಟಿದೆ. ಕೊರೊನಾ ಸಂಬಂಧ ಈಗಾಗಲೇ ಟಾಸ್ಕ್ ಫೋರ್ಸ್ ರಚನೆ ಆಗಿದೆ. ಕೊರೊನಾ ವಿರುದ್ಧ ಕೆಲಸ ಮಾಡಲು ಎನ್‍ಸಿಸಿ, ಎನ್‍ಎಸ್‍ಎಸ್ ಸ್ವಯಂ ಸೇವಕರು ಸೇರಿದಂತೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್ ಸದಸ್ಯರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದೇವೆ. ಪಬ್‍ಗಳು ಬಂದ್ ಮಾಡದಿದ್ದರೆ ಅವರ ಪರವಾನಗಿ ರದ್ದು ಮಾಡುತ್ತೇವೆ ಎಂದು ತಿಳಿಸಿದರು.