– ಯಾಮಿನಿ ಬಗ್ಗೆ ಮಾಹಿತಿ ಪಡೆಯಲು ಗ್ರೂಪ್ ಮಾಡಿದ್ದ ಆರೋಪಿ
ಬೆಂಗಳೂರು: ಶ್ರೀರಾಂಪುರದಲ್ಲಿ (Srirampura) ಯುವತಿಯ ಕತ್ತು ಕೊಯ್ದು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯ ಫೋನ್ ರಿಟ್ರೀವ್ ಮಾಡಿದ್ದಾರೆ. ಯಾಮಿನಿ ಬಗ್ಗೆ ಮಾಹಿತಿ ಪಡೆಯಲು ಪೊಲೀಸ್ ಎಂದು ಬೆದರಿಸಿ ಕಾಲೇಜು ವಿದ್ಯಾರ್ಥಿಗಳೊಂದಿಗೆ `ಮಿಷನ್ ಯಾಮಿನಿ ಪ್ರಿಯಾ’ ಅಂತಾ ವಾಟ್ಸಪ್ ಗ್ರೂಪ್ ಮಾಡಿದ್ದಾಗಿ ತಿಳಿದುಬಂದಿದೆ.
ಪ್ರಕರಣ ಸಂಬಂಧ ಶ್ರೀರಾಂಪುರ ಪೊಲೀಸರು ತನಿಖೆ ನಡೆಸಿದಾಗ ಸ್ಫೋಟಕ ವಿಷಯಗಳು ಬೆಳಕಿಗೆ ಬಂದಿದೆ. ಆರೋಪಿ ವಿಘ್ನೇಶ್‌ನ್ನು ಅರೆಸ್ಟ್ ಮಾಡಿ, ಆತನ ಮೊಬೈಲ್‌ನ್ನು ವಶಕ್ಕೆ ಪಡೆದು ರಿಟ್ರೀವ್‌ಗೆ ಕಳುಹಿಸಲಾಗಿತ್ತು. ಸದ್ಯ ವರದಿ ಬಂದಿದೆ.ಇದನ್ನೂ ಓದಿ: ಕತ್ತು ಕೊಯ್ದು ಹತ್ಯೆ ಕೇಸ್ – ಮಿಷನ್ ಯಾಮಿನಿ ಪ್ರಿಯಾ ಅಂತ ವಾಟ್ಸಪ್ ಗ್ರೂಪ್ ಮಾಡಿದ್ದ ಕಿಲ್ಲರ್
ಆರೋಪಿ ಈ ಹಿಂದೆ ಬಿಬಿಎಂಪಿಯಲ್ಲಿ ಮಾರ್ಷಲ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಯಾಮಿನಿ ಓದುತ್ತಿದ್ದ ಕಾಲೇಜಿಗೆ ಹೋಗಿ ಅದೇ ಕಾಲೇಜಿನ ನಾಲ್ವರು ಯುವಕರಿಗೆ ಕ್ರೈಂ ಪೊಲೀಸ್ ಅಂತಾ ಪರಿಚಯ ಮಾಡಿಕೊಂಡಿದ್ದಾನೆ. ಇದೇ ವೇಳೆ `ಮಿಷನ್ ಯಾಮಿನಿ ಪ್ರಿಯಾ’ ಅಂತ ವಾಟ್ಸಪ್ ಗ್ರೂಪ್ ಕ್ರಿಯೆಟ್ ಮಾಡಿದ್ದ. ಯಾಮಿನಿಯ ಸಂಪೂರ್ಣ ಚಲನವಲನಗಳನ್ನು ನಂಗೆ ಗ್ರೂಪ್‌ನಲ್ಲಿ ಅಪ್ಡೇಟ್ ಮಾಡಬೇಕು ಎಂದು ಬೆದರಿಸಿದ್ದನಂತೆ. ಅದರಂತೆ ಯಾಮಿನಿ ಎಷ್ಟೊತ್ತಿಗೆ ಕಾಲೇಜಿಗೆ ಬರುತ್ತಿದ್ಲು, ಯಾರ ಜೊತೆಗೆ ಮಾತಾಡಿದ್ಲು, ಯಾವಾಗ ಕಾಲೇಜಿನಿಂದ ಹೊರಟ್ಲು, ಹೀಗೆ ಯುವತಿಯ ಫಿನ್ ಟು ಪಿನ್ ಮಾಹಿತಿ ಆ ಗ್ರೂಪ್‌ನಲ್ಲಿ ಬರ್ತಿತ್ತಂತೆ. ಆ ಎಲ್ಲಾ ಮೆಸೇಜ್‌ಗಳು ಮೊಬೈಲ್ ರಿಟ್ರೀವ್ ವೇಳೆ ಪತ್ತೆಯಾಗಿದೆ.
ಬಲವಂತವಾಗಿ ಮಾಂಗಲ್ಯ ಕಟ್ಟಿದ್ನಂತೆ
ಮೃತ ಯುವತಿಗೆ ಬಲವಂತವಾಗಿ ಮಾಂಗಲ್ಯ ಕೂಡ ಕಟ್ಟಿದ್ದನಂತೆ. ಈ ವಿಚಾರ ಮನೆಯಲ್ಲಿ ತಿಳಿಸಿದ್ರೆ ಕೊಲೆ ಮಾಡ್ತೇನೆ ಎಂದು ಬೆದರಿಸಿದ್ದನಂತೆ. ಇನ್ನೂ ಇಬ್ಬರು ಒಂದೇ ಏರಿಯಾದವರಾಗಿದ್ದು, ಯಾಮಿನಿ ಪೋಷಕರ ಬಳಿ ಹೆಣ್ಣು ಕೇಳಿದ್ದನಂತೆ, ಆದರೆ ಅವರು ನಿರಾಕರಿಸಿದ್ದರು. ಬಳಿಕ ಒಂದು ಸಾರಿ ಗಲಾಟೆ ಮಾಡಿದಾಗ ಆತನ ವಿರುದ್ಧ ಯಾಮಿನಿ ಪೋಷಕರು ದೂರು ಕೊಟ್ಟಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ
ಏನಿದು ಪ್ರಕರಣ?
ಅ.16ರಂದು ಮಧ್ಯಾಹ್ನ ಆರೋಪಿ ವಿಘ್ನೇಶ್ ಶ್ರೀರಾಂಪುರ ರೈಲ್ವೇ ನಿಲ್ದಾಣದ ಬಳಿ ಯಾಮಿನಿಯನ್ನು ಕತ್ತು ಕೊಯ್ದು ಹತ್ಯೆ ಮಾಡಿ, ತಾನು ಬಳಸುತ್ತಿದ್ದ ಮೊಬೈಲ್ ಎಸೆದು ಎಸ್ಕೇಪ್ ಆಗಿದ್ದ. ಬಳಿಕ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದನ್ನೂ ಓದಿ:ಬೆಂಗಳೂರಲ್ಲಿ ವಿದ್ಯಾರ್ಥಿನಿ ಕತ್ತು ಕೊಯ್ದು ಹತ್ಯೆ ಕೇಸ್ – ಪಾಗಲ್ ಪ್ರೇಮಿ ಬಂಧನ

