ಚಾಮರಾಜನಗರ: ಪ್ರಧಾನಿ ಮೋದಿ ಬಗ್ಗೆ ಟೀಕಿಸಲು ಕಾಂಗ್ರೆಸ್‍ಗೆ ಹಕ್ಕೇನಿದೆ? ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನೆ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಮೋದಿಯವರ ವಿರುದ್ಧ ಹೆಬ್ಬೆಟ್ ಗಿರಾಕಿ ಎಂಬ ಪದ ಬಳಸಿ ಮಾಡಿರುವ ಟ್ವೀಟ್‍ಗೆ ತಿರುಗೇಟನ್ನು ಕೊಟ್ಟರು.
Advertisement
ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಪಕ್ಷದಲ್ಲಿ ಸರಿಯಾದ ನಾಯಕರಿಲ್ಲ. ಪಾರ್ಲಿಮೆಂಟ್ ಹಾಗೂ ಅಸೆಂಬ್ಲಿಗಳಲ್ಲಿ ಸರಿಯಾಗಿ ಮಾತನಾಡುವವರಿಲ್ಲ. ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಅದರ ಬಗ್ಗೆ ಆಲೋಚಿಸಬೇಕು. ಆ ಮೂಲಕ ಪಕ್ಷ ಸಂಘಟನೆಗೆ ಒತ್ತು ಕೊಡಲಿ ಅಂತಾ ತಾಕೀತು ಮಾಡಿದರು. ಇದನ್ನೂ ಓದಿ: ಹೆಬ್ಬೆಟ್‍ಗಿರಾಕಿ ಮೋದಿ ತನ್ನ ಹೆಸರನ್ನು ‘ಮೌನೇಂದ್ರ ಮೋದಿ’ ಎಂದು ಬದಲಿಸಿಕೊಳ್ಳಲಿ: ಕಾಂಗ್ರೆಸ್
Advertisement
Advertisement
ವಾಸ್ತವಗಳ ಬಗ್ಗೆ ಮಾತನಾಡದ ಪ್ರಧಾನಿ ತಮ್ಮ ಹೆಸರನ್ನು ಮೌನೇಂದ್ರ ಮೋದಿ ಎಂದು ಬದಲಿಸಿಕೊಳ್ಳಲಿ.
* ಬೆಲೆ ಏರಿಕೆಯ ಬಗ್ಗೆ -ಮೌನ
* ಕಾಶ್ಮೀರದ ದಳ್ಳುರಿಗೆ -ಮೌನ
* ಚೀನಾ ಅತಿಕ್ರಮಣಕ್ಕೆ -ಮೌನ
* ರೈತರ ಹತ್ಯೆಗೆ -ಮೌನ
* ಅದಾನಿ ಡ್ರಗ್ಸ್ ದಂಧೆಯ ಬಗ್ಗೆ -ಮೌನ
* ನಿರುದ್ಯೋಗದ ಬಗ್ಗೆ -ಮೌನ
* ಪತ್ರಿಕಾಗೋಷ್ಠಿಗೆ -ಮೌನ
#ಹೆಬ್ಬೆಟ್ ಗಿರಾಕಿಮೋದಿ ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿತ್ತು. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ಪುಂಡರ ಕುಚೇಷ್ಟೆ – ಕಾರಿನಲ್ಲಿ ಹೋಗ್ತಿದ್ದ ದಂಪತಿಗೆ ಅಡ್ಡಗಟ್ಟಿ ಧಮ್ಕಿ
Advertisement
ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇಂದು ಪೆಟ್ರೋಲ್ 66, ಡೀಸೆಲ್ 55 ಕ್ಕೆ ದೊರಕುತ್ತಿತ್ತು. ಜನರನ್ನು ದೋಚಿ, ಉದ್ಯಮಿಗಳ ಹೊಟ್ಟೆ ತುಂಬಿಸುವ ಯೋಜನೆ ಹೊಂದಿರುವ ಬಿಜೆಪಿ ಸರ್ಕಾರದ ತೆರಿಗೆ ಭಯೋತ್ಪಾದನೆಯಿಂದ ಎಲ್ಲಾ ಅಗತ್ಯ ವಸ್ತುಗಳು ದುಬಾರಿಯಾಗಿವೆ. ಜನರ ಕಷ್ಟಗಳನ್ನು ತಿಳಿಯದ #ಹೆಬ್ಬೆಟ್ ಗಿರಾಕಿ ಮೋದಿಯಿಂದ ದೇಶ ನಲುಗುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.