– ಪ್ರಸಾದ್‌ಗೆ ಮೋದಿ ಬಗ್ಗೆ ಗೌರವವಿತ್ತು ಎಂದ ಮಾಜಿ ಶಾಸಕ
ಚಾಮರಾಜನಗರ: ಸಂಸದ ದಿವಂಗತ ವಿ. ಶ್ರೀನಿವಾಸಪ್ರಸಾದ್ (Srinivasa Prasad) ಅವರು ಬಿಜೆಪಿ ತೊರೆಯುವ ಬಗ್ಗೆ ಯೋಚನೆ ಮಾಡಿರಲಿಲ್ಲ. ಆದರೂ ಅವರು ಬಿಜೆಪಿ ಬಗ್ಗೆ ಬೇಸರ ಮಾಡಿಕೊಂಡಿದ್ದಾರೆ ಅಂತ ಸುಳ್ಳು ಹಬ್ಬಿಸಿದರು ಎಂದು ಪ್ರಸಾದ್ ಅಳಿಯ, ಮಾಜಿ ಶಾಸಕ ಹರ್ಷವರ್ಧನ್ (Harshavardhan) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
- Advertisement 2-
ಚಾಮರಾಜನಗರದಲ್ಲಿ (Chamarajanagara) ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ಷವರ್ಧನ್, ಶ್ರೀನಿವಾಸಪ್ರಸಾದ್ ಅವರು ಬಿಜೆಪಿ (BJP) ತೊರೆಯುವ ಬಗ್ಗೆ ಯೋಚನೆಯೇ ಮಾಡಿರಲಿಲ್ಲ. ಅವರ ಭಾವನೆಗಳನ್ನು ಕೆಲವರು ಬೇರೆ ರೀತಿ ಅರ್ಥಮಾಡಿಕೊಂಡರು. ತಮಗೆ ಲಾಭ ಆಗುವ ರೀತಿಯಲ್ಲಿ ಬಳಸಿಕೊಂಡರು. ಚುನಾವಣೆ ಸಂದರ್ಭದಲ್ಲಿ ಗೊಂದಲ ಮೂಡಿಸಿದ್ರು. ಶ್ರೀನಿವಾಸಪ್ರಸಾದ್‌ಗೆ ಬಿಜೆಪಿ ಬಗ್ಗೆ ಬೇಸರವಿದೆ ಅಂತ ಸುಳ್ಳು ಹಬ್ಬಿಸಿದ್ರು ಎಂದು ಕಿಡಿ ಕಾರಿದ್ದಾರೆ.
- Advertisement 3-
- Advertisement 4-
ಪ್ರಸಾದ್ ಅವರಿಗೆ ಬೇಸರ ಇದ್ದಿದ್ದರೆ, ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದರು. ಆದ್ರೆ ಅವರಿಗೆ ಆ ಯೋಚನೆ ಬಂದಿಲ್ಲ. ಏಕೆಂದರೆ ಪ್ರಸಾದ್ ಅವರಿಗೆ ಮೋದಿ ಅವರ ಬಗ್ಗೆ ಅಪಾರ ಗೌರವ ಇತ್ತು. ಅಂಬೇಡ್ಕರ್ ಅವರ 5 ಪುಣ್ಯ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಕ್ಕೆ ಮೋದಿ ಬಗ್ಗೆ ಅವರಿಗೆ ಹೆಮ್ಮೆ ಇತ್ತು. ಕಾಂಗ್ರೆಸ್ ಮಾಡದ ಕೆಲಸವನ್ನು ಮಾಡಿ ತೋರಿಸಿದೆ ಅಂತಾ ಬಿಜೆಪಿಯನ್ನು ತುಂಬಾ ಹಚ್ಚಿಕೊಂಡಿದ್ದರು ಎಂದು ನುಡಿದಿದ್ದಾರೆ.
ಕೆಲವರು ಪ್ರಸಾದ್ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ಸಿದ್ದರಾಮಯ್ಯ (Siddaramaiah) ಅವರು ಪ್ರಸಾದ್ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಅಂತ ಹೇಳಿದ್ದರು. ತಮ್ಮ ಸಚಿವ ಸಂಪುಟದಿಂದ ಶ್ರೀನಿವಾಸಪ್ರಸಾದ್‌ರನ್ನ ತೆಗೆದಾಗ ಏನಾಗಿತ್ತು? ಆಗ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು ಸಿದ್ದರಾಮಯ್ಯಗೆ ತಿಳಿದಿರಲಿಲ್ಲವೇ? ಸಂದರ್ಭ ಬರಲಿ, ಇದಕ್ಕೆಲ್ಲ ಉತ್ತರಿಸುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.