ಮೈಸೂರು: ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ (C Ramesh) ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್ (Srinivas Prasad) ನಡುವೆ ಮಾತಿನ ಚಕಮಕಿ ನಡೆದು ಏಕ ವಚನದಲ್ಲೇ ಪರಸ್ಪರ ವಾಗ್ದಾಳಿ ನಡೆಸಿ ಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ಟಿ ನರಸೀಪುರ ಅತಿಥಿ ಗೃಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಸಿ ರಮೇಶ್‍ರನ್ನು ಆಚೆ ಕಳುಹಿಸು ಎಂದ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಕಾರ್ಯಕ್ರಮದಲ್ಲಿ ಬರಿ ಕೀಟಲೆ ಮಾಡಲಿಕ್ಕೆ ಬರುತ್ತೀಯಾ? ಎಂದು ಗದುರಿದ್ದಾರೆ. ಇದನ್ನೂ ಓದಿ; ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಸತ್ತು ಹೋಗಿವೆ – ರೈತರ ಆಕ್ರೋಶ
ಇದು ಬಿಜೆಪಿ (BJP) ಸರ್ಕಾರದ ಕಾರ್ಯಕ್ರಮ. ನನ್ನನ್ನ ಅವಮಾನ ಮಾಡಲಿಕ್ಕೆ ಕರೆದೆಯಾ? ಮತ್ತೊಮ್ಮೆ ನನ್ನನ್ನ ಯಾವುದೇ ಕಾರ್ಯಕ್ರಮಕ್ಕೆ ಕರೆಯಬೇಡ. ನಿನ್ನ ಮುಂದೆ ಯಾವುದೇ ಕಾರ್ಯಕ್ರಮಗಳಿಗೆ ನಾನು ಬರುವುದಿಲ್ಲ ನಾನು ನಿನ್ನನ್ನ ಸುಮ್ಮನೆ ಬಿಡಲ್ಲ ಸಂಸದ ಶ್ರೀನಿವಾಸ್ ಪ್ರಸಾದ್ ಗೆ ಸಿ ರಮೇಶ್ ತಿರುಗೇಟು ನೀಡಿದ್ದಾರೆ.