ಹಾವೇರಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಮೂರು ವರ್ಷಗಳ ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿ, ಯೋಜನೆಗಳನ್ನು ರೂಪಿಸುವಲ್ಲಿ ಹಿನ್ನಡೆಯಾಗಿದೆ. ಚುನಾವಣೆ ಕೇವಲ ಒಂದು ವರ್ಷ ಬಾಕಿ ಇರುವ ಕಾರಣ ಜನರ ಗಮನ ಬೇರೆ ಕಡೆ ಸೆಳೆಯಲು ಬಿಜೆಪಿ ಪಿತೂರಿ ನಡೆಸಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ಕಿಡಿಕಾರಿದ್ದಾರೆ.
ಹಲಾಲ್ ಕಟ್, ಮಸೀದಿ ಮೈಕ್ ಬ್ಯಾನ್ ವಿವಾದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತ್ಯಾತೀತ ನೆಲದ ಅಡಿಯಲ್ಲಿ ಈ ದೇಶದ ಇತಿಹಾಸ, ಪರಂಪರೆ ಇದೆ. ಜನರ ಮನಸ್ಸುಗಳನ್ನು ಒಡೆಯುವ ಮೂಲಕ ಧರ್ಮಗಳ ವಿಚಾರ ಮುಂಚೂಣಿಗೆ ತರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೊರಟ್ಟಿ ಬಿಜೆಪಿಗೆ ಬಂದರೆ ಸ್ವಾಗತ: ಶಿವರಾಮ್ ಹೆಬ್ಬಾರ್
ಈ ಮೂಲಕ ಅಭಿವೃದ್ಧಿಯ ಹಿನ್ನಡೆ ಮರೆಮಾಚುವ ಪ್ರಯತ್ನ ನಡೆದಿದೆ. ಇದನ್ನು ನಾವು ಖಂಡಿಸುತ್ತೇವೆ. ಜನ ಮತ್ತೆ ಒಗ್ಗೂಡಿ ತಪ್ಪಿತಸ್ಥರಿಗೆ ಪಾಠ ಕಲಿಸಲಿದ್ದಾರೆ ಎಂದು ಸಿಡಿದರು. ಇದನ್ನೂ ಓದಿ: ಹೆಚ್.ಡಿ ಕುಮಾರಸ್ವಾಮಿ ಇತಿಹಾಸ ಅರ್ಥ ಮಾಡಿಕೊಳ್ಳಬೇಕು: ಡಾ.ಕೆ. ಸುಧಾಕರ್