ಕೇರಳ ಪೊಲೀಸರಿಂದ ಶೃಂಗೇರಿ ಮೂಲದ ನಕ್ಸಲರ ಬಂಧನ

Public TV
1 Min Read
Naxals arrest

ಚಿಕ್ಕಮಗಳೂರು: ಶೃಂಗೇರಿ ಮೂಲದ ನಕ್ಸಲರನ್ನು ಕೇರಳದ ಸುಲ್ತಾನ್ ಬತ್ತೇರಿ ಪೊಲೀಸರು ಬಂಧಿಸಿದ್ದಾರೆ.

ನಕ್ಸಲ್ ನಾಯಕ ಬಿ.ಜಿ.ಕೃಷ್ಣ ಮೂರ್ತಿ, ಸಾವಿತ್ರಿ ಬಂಧಿತ ನಕ್ಸಲರು. ಕೇರಳದ ಸುಲ್ತಾನ್ ಬತ್ತೇರಿನಲ್ಲಿ ಮಲೆನಾಡ ನಕ್ಸಲಿಸಂನಲ್ಲಿ ಮುಂಚೂಣಿಯಲ್ಲಿದ್ದ ಕೃಷ್ಣಮೂರ್ತಿ, ಸಾವಿತ್ರಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. 2003ರಿಂದ ಕೃಷ್ಣಮೂರ್ತಿ ಭೂಗತನಾಗಿದ್ದು, ತನ್ನ ತಂದೆ ಗೋಪಾಲ್ ರಾವ್ ತೀರಿಕೊಂಡಾಗಲೂ ಬಂದಿರಲಿಲ್ಲ. ಇದನ್ನೂ ಓದಿ: ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!

mdk naxal ANF soldiers

ಕೃಷ್ಣಮೂರ್ತಿ ಹೆಚ್ಚು ಶೃಂಗೇರಿ ತಾಲೂಕಿನ ಬುಕ್ಕಡಿ ಬೈಲಿನಲ್ಲಿ ವಾಸವಾಗಿದ್ದು, ಶೃಂಗೇರಿಯಲ್ಲಿ ಪದವಿ, ಶಿವಮೊಗ್ಗದಲ್ಲಿ ಎಲ್.ಎಲ್.ಬಿ. ಶಿಕ್ಷಣ ಪಡೆದಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದ ವೇಳೆ ನಕ್ಸಲ್ ಗೆ ಸೇರಿಕೊಂಡಿದ್ದರು. ಈ ಹಿನ್ನೆಲೆ ಇವರು 2003 ರಿಂದಲೂ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

NAXAL 1 3

ಪ್ರಸ್ತುತ 48 ವರ್ಷದ ಕೃಷ್ಣಮೂರ್ತಿ ಮೇಲೆ ರಾಜ್ಯಾದ್ಯಂತ ಸುಮಾರು 53 ಪ್ರಕರಣಗಳಿವೆ. ಇನ್ನೂ 36 ವರ್ಷದ ಸಾವಿತ್ರಿ ಮೇಲೆ 22 ಕೇಸ್ ಗಳಿವೆ. ಸಾವಿತ್ರಿ ಕಳಸ ತಾಲೂಕಿನ ಮಾವಿನಕೆರೆ ಗ್ರಾಮದವರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *