ಕೊಲೊಂಬೋ: ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ನೆರವು ನೀಡಿದ ಭಾರತಕ್ಕೆ ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಧನ್ಯವಾದವನ್ನು ಸಲ್ಲಿಸಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿದ ಶ್ರೀಲಂಕಾದ ಅಧ್ಯಕ್ಷ, ಆಹಾರ ಮತ್ತು ಔಷಧಿ ಸೇರಿದಂತೆ ಅಗತ್ಯ ಸರಕುಗಳ ಆಮದುಗಾಗಿ ಯುಡಿಎಸ್ 1 ಬಿಲಿಯನ್ ಕ್ರೆಡಿಟ್ ಲೈನ್ ಅನ್ನು ಒದಗಿಸಿದ್ದಕ್ಕಾಗಿ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
Advertisement
Pleased to call on President @GotabayaR of Sri Lanka.
Reviewed various dimensions of our close neighbourly relationship.
Assured him of India’s continued cooperation and understanding. pic.twitter.com/xAvCEuxhYV
— Dr. S. Jaishankar (@DrSJaishankar) March 28, 2022
ಈ ವರ್ಷ ಶ್ರೀಲಂಕಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವವನ್ನು ಗುರುತಿಸಲು ನಾಣ್ಯಗಳು ಮತ್ತು ಅಂಚೆಚೀಟಿ ಬಿಡುಗಡೆ ಸೇರಿದಂತೆ ಹಲವಾರು ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
Advertisement
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಜೈಶಂಕರ್, ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರನ್ನು ಭೇಟಿ ಮಾಡಲು ಸಂತೋಷವಾಗಿದೆ. ನಮ್ಮ ನೆರೆಹೊರೆಯ ಸಂಬಂಧದ ವಿವಿಧ ಆಯಾಮಗಳನ್ನು ಪರಿಶೀಲಿಸಲಾಗಿದೆ. ಭಾರತದ ನಿರಂತರವಾಗಿ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಆರ್ಥಿಕ ಅವನತಿಯತ್ತ ಶ್ರೀಲಂಕಾ – ಸಕ್ಕರೆ, ಬೇಳೆಗೆ ಚಿನ್ನದ ಬೆಲೆ, 1 ಟೀಗೆ 100 ರೂ.
Advertisement
ಮೂರು ದಿನಗಳ ಕಾಲ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶ್ರೀಲಂಕಾ ಪ್ರವಾಸದಲ್ಲಿದ್ದು, ಇಂದಿನಿಂದ ಕೊಲಂಬೊದಲ್ಲಿ ಪ್ರಾರಂಭವಾಗುವ 5ನೇ ಬಿಮ್‍ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಸ್ಥಿತಿ ಗಂಭೀರ – ದಿನ ಬಳಕೆ ವಸ್ತುಗಳ ಬೆಲೆ ಎಷ್ಟು?