ಮೈಸೂರು: ಕಾಂಗ್ರೆಸ್‌ನಲ್ಲಿದ್ದು (Congress) ನಂತರ ಬಿಜೆಪಿ ಸೇರಿ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಪುನಃ ಕಾಂಗ್ರೆಸ್‌ಗೆ ಮರಳಿ ಚುನಾವಣೆಯಲ್ಲಿ ಗೆದ್ದಿದ್ದರು.
ಲೋಕಸಭೆಗೆ 11ನೇ (Lok Sabha Election 2024) ಸಾರ್ವತ್ರಿಕ ಚುನಾವಣೆಯು 1996 ರಲ್ಲಿ ನಡೆಯಿತು. ಆಗ ರಾಜ್ಯಾದ್ಯಂತ ಜನತಾದಳದ ಅಲೆ. ಹೀಗಿದ್ದರೂ ಮೈಸೂರಿನಲ್ಲಿ ಜನತಾದಳ ಗೆಲ್ಲಲಿಲ್ಲ. 1984, 1989 ರಲ್ಲಿ ಕಾಂಗ್ರೆಸ್ (Congress) ಟಿಕೆಟ್ ಮೇಲೆ ಗೆದ್ದು, 1991 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕಾಂಗ್ರೆಸ್‌ಗೆ ಮರಳಿ ಅಭ್ಯರ್ಥಿಯಾಗಿ ಗೆದ್ದರು. ಇದನ್ನೂ ಓದಿ: Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು
Advertisement
ಆಗ ರಾಜ್ಯದಲ್ಲಿ ಹೆಚ್.ಡಿ.ದೇವೇಗೌಡರ (H.D.Deve Gowda) ನೇತೃತ್ವದ ಜನತಾದಳ ಸರ್ಕಾರ ಅಧಿಕಾರದಲ್ಲಿತ್ತು. ರಾಜ್ಯಾದ್ಯಂತ ಜನತಾದಳದ ಅಲೆ ಕಂಡು ಬಂದಿತ್ತು. ಇದರಿಂದಾಗಿಯೇ ಆ ಪಕ್ಷ 16 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ, ಕೊನೆಗೆ ದೇವೇಗೌಡರೇ ಪ್ರಧಾನಿಯಾಗಲು ಸಾಧ್ಯವಾಯಿತು.
Advertisement
ಆದರೆ ಮೈಸೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ನ ಒಡೆಯರ್ ಗೆದ್ದರು. ಜನತಾದಳದಿಂದ ಕಣದಲ್ಲಿದ್ದ ಜಿ.ಟಿ.ದೇವೇಗೌಡರು ಪ್ರಬಲ ಪೈಪೋಟಿ ನೀಡಿ, ಅಲ್ಪ ಮತಗಳ ಅಂತರದಿಂದ ಪರಾಭವಗೊಂಡರು. ಒಡೆಯರ್‌ಗೆ 2,58,299 ಮತ್ತು ಜಿ.ಟಿ.ದೇವೇಗೌಡರಿಗೆ 2,46,623 ಮತಗಳು ದೊರೆತಿದ್ದವು. ಇದನ್ನೂ ಓದಿ: ಎರಡನೇ ಬಾರಿಗೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಒಡೆಯರ್!