Connect with us

Cinema

ಮುಂಬೈ ತಲುಪಿದ ಶ್ರೀದೇವಿ ಮೃತದೇಹ- ವಿಲೆ ಪಾರ್ಲೆಯಲ್ಲಿ ಇಂದು ಅಂತಿಮ ಸಂಸ್ಕಾರ

Published

on

ಮುಂಬೈ: ದುಬೈನಲ್ಲಿ ಬಾತ್‍ಟಬ್‍ನಲ್ಲಿ ಶನಿವಾರ ಆಕಸ್ಮಿಕವಾಗಿ ಸಾವನ್ನಪ್ಪಿದ ನಟಿ ಶ್ರೀದೇವಿ ಪಾರ್ಥಿವ ಶರೀರ ಮಂಗಳವಾರ ರಾತ್ರಿ ಮುಂಬೈಗೆ ಆಗಮಿಸಿದೆ.

ನಿನ್ನೆ 7 ಗಂಟೆಗೆ ದುಬೈನಿಂದ ಹೊರಟ ಚಾರ್ಟರ್ಡ್ ವಿಮಾನ ರಾತ್ರಿ 9.30 ವೇಳೆಗೆ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಶವ ಸ್ವೀಕರಿಸಲು ಬೋನಿ ಕಪೂರ್ ಸಹೋದರ ಅನಿಲ್ ಕಪೂರ್ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ರು. ಬಳಿಕ ಪಾರ್ಥೀವ ಶರೀರವನ್ನು ಆಂಬ್ಯುಲೆನ್ಸ್ ನಲ್ಲಿ ಲೋಕಂಡ್‍ವಾಲದಲ್ಲಿರುವ ನಿವಾಸಕ್ಕೆ ಒಯ್ಯಲಾಯ್ತು. ಇದನ್ನೂ ಓದಿ: ಅನಿಲ್ ಕಪೂರ್ ಕೈ ಹಿಡಿದು ಹೆಜ್ಜೆ ಹಾಕಿದ್ದ ಶ್ರೀದೇವಿ- ಕೊನೆಯ ಡ್ಯಾನ್ಸ್ ನೋಡಿ

ಇಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಅಂಧೇರಿಯ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್‍ನಲ್ಲಿ ಶ್ರೀದೇವಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಈ ವೇಳೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: ನಟಿ ಶ್ರೀದೇವಿ ಸಾವಿನ ರಹಸ್ಯ ಬಯಲು

ಮಧ್ಯಾಹ್ನ 2 ಗಂಟೆ ವೇಳೆಗೆ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್‍ನಿಂದ ವಿಲೆ ಪಾರ್ಲೆ ಸೇವಾ ಸೇವಾ ಸಮಾಜದತ್ತ ಶ್ರೀದೇವಿಯ ಅಂತಿಮ ಯಾತ್ರೆ ಶುರುವಾಗಲಿದೆ. ನಂತರ ಸುಮಾರು 3.30ರ ವೇಳೆಗೆ ವಿಲೆ ಪಾರ್ಲೆ ಸೇವಾ ಸಮಾಜದ ಶವಾಗಾರದಲ್ಲಿ ನಟಿ ಶ್ರೀದೇವಿ ಅಂತಿಮ ಸಂಸ್ಕಾರ ನಡೆಯಲಿದೆ. ಅರ್ಜುನ್ ಕಪೂರ್ ಅಥವಾ ಬೋನಿ ಕಪೂರ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ಸಾಧ್ಯತೆಗಳಿವೆ. ಇದನ್ನೂ ಓದಿ: ಶ್ರೀದೇವಿಯವರ ಪ್ರಾಣಕ್ಕೆ ವಿಪರೀತ ಶಸ್ತ್ರಚಿಕಿತ್ಸೆಯೇ ಮುಳುವಾಯ್ತಾ? ಜನ ಹೇಳೋದು ಏನು?

ನಾಲ್ಕು ದಶಕಗಳ ಕಾಲ ಭಾರತೀಯ ಸಿನಿರಂಗವನ್ನು ಆಳಿದ ನೆಚ್ಚಿನ ನಟಿಯ ಅಂತಿಮ ದರ್ಶನ ಪಡೆಯಲು ಬಾಲಿವುಡ್ ದಂಡೇ ಹರಿದು ಬರ್ತಿದೆ. ಅಲ್ಲದೆ ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ವೆಂಕಟೇಶ್ ಮುಂಬೈ ತಲುಪಿದ್ದಾರೆ. ಇನ್ನು ಪಾರ್ಥಿವ ಶರೀರ ಬರ್ತಿದ್ದಂತೆ ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಸಲ್ಮಾನ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಸೇರಿದಂತೆ ಹಲವರು ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿದ್ರು. ಇದನ್ನೂ ಓದಿ: ಶ್ರೀದೇವಿ ಸಾವಿನ 30 ನಿಮಿಷ ಮೊದ್ಲು ಸರ್ಪ್ರೈಸ್ ನೀಡಲು ಮುಂದಾಗಿದ್ದ ಪತಿ ಬೋನಿ ಕಪೂರ್

ರಾತ್ರಿಯೇ 2000 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಶ್ರೀದೇವಿ ನಿವಾಸದ ಮುಂದೆ ಜಮಾಯಿಸಿದ್ರು. ಈ ವೇಳೆ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ರು. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Click to comment

Leave a Reply

Your email address will not be published. Required fields are marked *