ಕಲಬುರಗಿ: ಇನ್ಮುಂದೆ ಪ್ರತಿಯೊಬ್ಬ ಹಿಂದೂ (Hindu) ತನ್ನ ಮನೆಯಲ್ಲಿ ತಲ್ವಾರ್ ಇಡಬೇಕು. ಮನೆಯಲ್ಲಿ ಎಲ್ಲರಿಗೂ ಕಾಣೋ ರೀತಿಯಲ್ಲಿ ತಲ್ವಾರ್ (Talwar) ಇಡಬೇಕು ಎಂದು ಶ್ರೀರಾಮಸೇನೆ (SriRamsena) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
Advertisement
ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂಗಳು ಮನೆ ಮನೆಯಲ್ಲಿ ತಲ್ವಾರ್ ಇಡಬೇಕು. ಮನೆಯಲ್ಲಿ ಕಾಣೋ ರೀತಿಯಲ್ಲಿ ಇಡಬೇಕು. ಮೊದಲು ನಾವೆಲ್ಲಾ ಆಯುಧಗಳ ಪೂಜೆ ಮಾಡ್ತಿದ್ದೀವಿ, ಪುಸ್ತಕ, ಪೆನ್ನು, ವಾಹನಗಳ ಪೂಜೆ ಮಾಡ್ತಿದ್ದೇವೆ. ಆದ್ರೆ ಇನ್ಮುಂದೆ ತಲ್ವಾರ್, ಚಾಕು, ಕೊಡಲಿ ಇಟ್ಟು ಪೂಜೆ ಮಾಡ್ಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಒಂಟಿ ಮನೆ ಕಳ್ಳತನ ಮಾಡಲು ಹೋಗಿದ್ದ ಗ್ಯಾಂಗ್‌ಗೆ ಶಾಕ್ – ಸಿನಿಮೀಯ ರೀತಿಯಲ್ಲಿ ರೋಚಕವಾಗಿ ಸೆರೆ
Advertisement
Advertisement
ಪೊಲೀಸರು (Police) ಠಾಣೆಯಲ್ಲಿ ಬಂದೂಕಿಗೆ ಪೂಜೆ ಮಾಡ್ತಾರೆ ಹೊರತು ಎಫ್‌ಐಆರ್‌ಗೆ (FIR) ಪೂಜೆ ಮಾಡಲ್ಲ. ಮನೆಯಲ್ಲಿ ಒಂದು ತಲ್ವಾರ್ ಇಡೋದು ಅಪರಾಧವಲ್ಲ. ಪೊಲೀಸರು ಬಂದು ಕೇಸ್ ಹಾಕ್ತೀವಿ ಅಂತಾ ಹೆದರಿಸಿದ್ರೆ, ಮೊದಲು ಶಸ್ತ್ರ ಹಿಡಿದು ನಿಂತಿರೋ ಕಾಳಿ, ದುರ್ಗೆ, ಹನುಮಂತ, ರಾಮನ ಮೇಲೆ ಕೇಸ್ ಹಾಕಿ ಅಂತಾ ಹೇಳಿ ಎಂದಿದ್ದಾರೆ. ಇದನ್ನೂ ಓದಿ: ಒಂಟಿ ಮನೆ ಕಳ್ಳತನ ಮಾಡಲು ಹೋಗಿದ್ದ ಗ್ಯಾಂಗ್‌ಗೆ ಶಾಕ್ – ಸಿನಿಮೀಯ ರೀತಿಯಲ್ಲಿ ರೋಚಕವಾಗಿ ಸೆರೆ
Advertisement
ತಲ್ವಾರ್ ಇಟ್ಟರೆ ಯಾರು ನಮ್ಮ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕೋದಿಲ್ಲ. ಹಾಗೆಂದು ತಲ್ವಾರ್ ಇಡೋದು ಯಾರನ್ನಾದರೂ ಹೊಡೆಯೋಕೆ ಮಾತ್ರವಲ್ಲ, ಧರ್ಮದ ರಕ್ಷಣೆ ಹಾಗೂ ದೇಶ ರಕ್ಷಣೆಗಾಗಿ ತಲ್ವಾರ್ ಇಡಬೇಕು ಎಂದು ಕರೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k